Breaking News

ಉ.ಕ. ಜಿಲ್ಲೆಯ ಮತ ಏಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ: ಡಿ.ಸಿ. ಕವಳಿಕಟ್ಟಿ

 

ಕಾರವಾರ:  ಇಲ್ಲಿನ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದ್ದು, ಭದ್ರತೆಗಾಗಿ 274 ಮಂದಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಶನಿವಾರ ಭಾರಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಮತ ಏಣಿಕೆ ಕಾರ್ಯವೂ ನಡೆಯಲಿದೆ.

ಮತ ಏಣಿಕೆ ಕಾರ್ಯಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.  ಉತ್ತರ ಕನ್ನಡ ಜಿಲ್ಲೆಯ ಎಲ್ಲ ಆರು ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಕುಮಟಾದ ಡಾ. ಎ. ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಸಕಲ ಸಿದ್ಧತೆ ಜಿಲ್ಲಾಡಳಿತ ಮಾಡಿಕೊಂಡಿದೆ.

  1.  

6 ಕ್ಷೇತ್ರಗಳ ಇವಿಎಂ ಯಂತ್ರಗಳ ಮತ ಎಣಿಕೆಯನ್ನು ಆರು ಪ್ರತ್ಯೇಕ ಕೊಠಡಿಗಳಲ್ಲಿ ಮಾಡಲಾಗುತ್ತದೆ. ಪ್ರತಿ ಕೊಠಡಿಯಲ್ಲಿ 12 ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಹಳಿಯಾಳ ಮತ್ತು ಕುಮಟಾ ಕ್ಷೇತ್ರಗಳಲ್ಲಿ ತಲಾ 215 ಮತಗಟ್ಟೆಗಳಿದ್ದು 18 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಕಾರವಾರ 262 ಮತ್ತು ಶಿರಸಿ ಕ್ಷೇತ್ರಗಳಲ್ಲಿ 264 ಮತಗಟ್ಟೆಗಳಿದ್ದು 22 ಸುತ್ತಿನಲ್ಲಿ ಮತ ಏಣಿಕೆ ಕಾರ್ಯವೂ ನಡೆಯಲಿದೆ. ಇನ್ನು ಅಂಚೆ ಮತ ಏಣಿಕೆ ಕಾರ್ಯಕ್ಕೆ  ಯಲ್ಲಾಪುರಕ್ಕೆ 3, ಹಳಿಯಾಳಕ್ಕೆ 2, ಉಳಿದ ಕ್ಷೇತ್ರಗಳಿಗೆ ತಲಾ 4 ಟೇಬಲ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಇವಿಎಂ ಮತ ಎಣಿಕೆ ಟೇಬಲ್‍ಗೆ ಒಬ್ಬರಂತೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು, ಒಬ್ಬರು ವೀಕ್ಷಕರ ನೇಮಕ ಮಾಡಲಾಗಿದೆ.  ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮತಗಟ್ಟೆಗಳ ವಿವಿ ಪ್ಯಾಟ್‍ಗಳಲ್ಲಿ ಸಂಗ್ರಹ ಆಗಿರುವ ವೋಟರ್ ಸ್ಲಿಪ್ ಗಳನ್ನು ಎಣಿಕೆ ಮಾಡಲಾಗುವದು.  5 ಮತಗಟ್ಟೆಗಳನ್ನು ಚುನಾವಣಾ ವೀಕ್ಷಕರು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಯಾರೂ ಕೂಡ ಮೊಬೈಲ್ ಮತ ಏಣಿಕೆ ಕೇಂದ್ರ ಒಯ್ಯುವುದಕ್ಕೆ ಆಸ್ಪದ ಇಲ್ಲ. ಮೊಬೈಲ್ ಕೌಂಟರ್ ನಲ್ಲಿಯೇ ಇಟ್ಟು ಹೋಗಬೇಕು ಎಂದು ತಿಳಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com