Breaking News

ದ.ಕ. ಜಿಲ್ಲೆಯಲ್ಲಿ ಶೇ75.87 ರಷ್ಟು ಮತದಾನ: 4,29,807 ಮಂದಿ ಮತವೇ ಹಾಕಿಲ್ಲ

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಗೆ ಶೇ 75.87 ರಷ್ಟು ಮತದಾನವಾಗಿದೆ.  8,70,991 ಪುರುಷ ಮತ್ತು 9,10,314 ಮಹಿಳೆ ಹಾಗೂ ಇತರ 84 ಸೇರಿದಂತೆ 17,81,389 ಮತದಾರರ ಪೈಕಿ 6,58,761 ಪುರುಷ, 6,92,803 ಮಹಿಳೆ ಹಾಗೂ ಇತರ 18 ಮಂದಿ ಸೇರಿದಂತೆ 13,51,582 ಮಂದಿ ಮತದಾನ ಮಾಡಿದ್ದಾರೆ.  4,29,807 ಮಂದಿ ಮತದಾನವೇ ಮಾಡುವುದೇ ಬೇಡ ಎಂದು ನಿರ್ಧಾರ ಮಾಡಿ ದೂರವೇ ಇದ್ದಾರೆ.

ಜಿಲ್ಲಾ ಸ್ವೀಪ್ ನಿಂದ ಸಾಕಷ್ಟು ಬಾರಿ ಚುನಾವಣಾ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾಗಲೂ ಜನರು ಮನೆ ಬಿಟ್ಟು ಹೊರಗೆ ಬಂದು ಮತದಾನ ಮಾಡುವುದಕ್ಕೆ ಮನಸ್ಸು ಮಾಡಿಲ್ಲ. ಮತದಾನ ಜಾಗೃತಿಗಾಗಿ ತರಹೇವಾರಿ ಕಾರ್ಯಕ್ರಮಗಳನ್ನು ಸ್ವೀಪ್ ಹಮ್ಮಿಕೊಂಡಿತ್ತು.

ಮಂಗಳೂರು ನಗರ ದಕ್ಷಿಣದಲ್ಲಿ ಅತೀ ಕಡಿಮೆ ಅಂದರೆ ಶೇ 64.89 ಮತದಾನ ಆಗಿದೆ. ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಅಂದರೆ ಶೇ 80.33 ಮತದಾನ ಆಗಿದೆ.

ಮಂಗಳೂರು: 1,00,688 ಪುರುಷ ಮತ್ತು 1,04,432 ಮಹಿಳೆ ಹಾಗೂ 9 ಇತರ ಸಹಿತ 2,05,129 ಮತದಾರರ ಪೈಕಿ 76,722 ಪುರುಷ ಮತ್ತು 82,006 ಮಹಿಳೆ ಸಹಿತ 1,58,728 ಮಂದಿ ಮತದಾನ ಮಾಡಿದ್ದಾರೆ. ಶೇ 77.38 ರಷ್ಟು ಮತದಾನ ಆಗಿದೆ.

ಮಂಗಳೂರು ಉತ್ತರ: 1,20,947 ಪುರುಷ ಮತ್ತು 1,28,461 ಮಹಿಳೆ ಹಾಗೂ 13 ಇತರ ಸಹಿತ 2,49,421 ಮತದಾರರ ಪೈಕಿ 85,775 ಪುರುಷ ಮತ್ತು 92,798 ಮಹಿಳೆ ಹಾಗೂ 1 ಇತರ ಸಹಿತ 1,78,574 ಮಂದಿ ಮತದಾನ ಮಾಡಿದ್ದಾರೆ.  ಶೇ 71.6 ರಷ್ಟು ಮತದಾನ ಆಗಿದೆ.

  1.  

ಮಂಗಳೂರು ನಗರ ದಕ್ಷಿಣ: 1,17,475 ಪುರುಷ ಮತ್ತು 1,28,222 ಮಹಿಳೆ ಹಾಗೂ 47ಇತರ ಸಹಿತ 2,45,744 ಮತದಾರರ ಪೈಕಿ 75,925 ಪುರುಷ ಮತ್ತು 83,534 ಮಹಿಳೆ, ಇತರ 15,  ಸೇರಿದಂತೆ 1,59,474 ಮಂದಿ ಮತದಾನ ಮಾಡಿದ್ದಾರೆ.  ಶೇ 64.89 ರಷ್ಟು ಮತದಾನ ಆಗಿದೆ.

ಬಂಟ್ವಾಳ: 1,12,229 ಪುರುಷ ಮತ್ತು 1,16,144 ಮಹಿಳೆ ಹಾಗೂ 4 ಇತರ ಸಹಿತ 2,28,377 ಮತದಾರರ ಪೈಕಿ 89,646 ಪುರುಷ ಮತ್ತು 93,679 ಮಹಿಳೆ, ಇತರ 1,  1,83,326 ಮಂದಿ ಮತದಾನಗೈದಿದ್ದು, ಶೇ.80.27 ಮತದಾನವಾಗಿದೆ.

ಮೂಡಬಿದ್ರೆ : 99,105 ಪುರುಷ ಮತ್ತು 1,05,955 ಮಹಿಳೆ ಹಾಗೂ 5 ಇತರ ಸಹಿತ 2,05,065 ಮತದಾರರ ಪೈಕಿ 74,740 ಪುರುಷ ಮತ್ತು 81,107 ಮಹಿಳೆ, ಇತರ 0,  1,55,847 ಮಂದಿ ಹಕ್ಕು ಚಲಾವಣೆ ಮಾಡಿದ್ದು, ಶೇ 76 ರಷ್ಟು ಮತದಾನ ಮಾಡಲಾಗಿದೆ.

ಬೆಳ್ತಂಗಡಿ: 1,13,774 ಪುರುಷ ಮತ್ತು 1,15,096 ಮಹಿಳೆ ಹಾಗೂ 1 ಇತರ ಸಹಿತ 2,28,871 ಮತದಾರರ ಪೈಕಿ 91,179 ಪುರುಷ ಮತ್ತು 92,664 ಮಹಿಳೆ, ಇತರ 0,  ಸೇರಿದಂತೆ 1,83,843 ಮಂದಿ ಮತದಾನಗೈದಿದ್ದು, ಶೇ.80.33 ಮತದಾನವಾಗಿದೆ.

ಪುತ್ತೂರು: 1,04,918 ಪುರುಷ ಮತ್ತು 1,07,832 ಮಹಿಳೆ ಹಾಗೂ 3 ಇತರ ಸಹಿತ 2,12,753 ಮತದಾರರ ಪೈಕಿ 83,876 ಪುರುಷ ಮತ್ತು 86,125 ಮಹಿಳೆ ಹಾಗೂ 1 ಇತರ ಸಹಿತ 1,70,002 ಮಂದಿ ಮತದಾನಗೈದಿದ್ದು, ಶೇ.79.91ಮತದಾನವಾಗಿದೆ.

ಸುಳ್ಯ: 1,01,855 ಪುರುಷ ಮತ್ತು 1,04,172 ಮಹಿಳೆ ಹಾಗೂ 2 ಇತರ ಸಹಿತ 2,06,029 ಮತದಾರರ ಪೈಕಿ 80,898 ಪುರುಷ ಮತ್ತು 80,890 ಮಹಿಳೆ ಸಹಿತ 1,61,788 ಮಂದಿ ಮತದಾನಗೈದಿದ್ದು, ಶೇ 78.53 ಮತದಾನ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com