Breaking News

31 ಸಾವಿರ ಬೂತ್ ಗಳಲ್ಲಿ ಬಿಜೆಪಿ ಮುನ್ನಡೆ: ಸಂತೋಷ ಟ್ವಿಟ್

 

ಬೆಂಗಳೂರು:   ರಾಜ್ಯದಲ್ಲಿ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ  31,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆ ಫಲಿತಾಂಶ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವಿಟ್​ ಮಾಡಿದ್ದಾರೆ.

  1.  

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ಮತದಾನ ನಡೆದಿದೆ. ಮತದಾನದ ನಂತರ ನಡೆದ ಸಮೀಕ್ಷೆಗಳು ಪ್ರಕಟವಾಗಿವೆ‌. ಬಹುತೇಕ ಸಮೀಕ್ಷೆಗಳು ಅತಂತ್ರ ಎಂದು ಸಮೀಕ್ಷೆಯಲ್ಲಿ ಹೇಳಿದ್ದು, ಎರಡು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಸಮೀಪದಲ್ಲಿದೆ ಎಂದು ಹೇಳಿವೆ. ಇನ್ನೂ ಕೆಲ ಸಮೀಕ್ಷೆ ಬಿಜೆಪಿಗೆ ಬಹುಮತದ ಸಿಗಲಿದೆ ಎಂದು ತಿಳಿಸಿವೆ. ಆದರೆ ಯಾವುದೇ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಮ್ಯಾಜಿಕ್​ ನಂಬರ್​ ದಾಟುವ ಸಾಧ್ಯತೆ ಇದೆ ಎಂದು ಹೇಳಿಲ್ಲ. ಆದರೆ ಬಿ.ಎಲ್ ಸಂತೋಷ ಅವರು ಈ ಟ್ವಿಟ್ ರಾಜಕೀಯ ಪಕ್ಷಗಳಲ್ಲಿ ಆಶ್ಚರ್ಯ ಮೂಡಿಸಿದೆ.

ಸಮೀಕ್ಷೆಗಳು ಬಿಜೆಪಿಗೆ 2014 ರಲ್ಲಿ 282 ಅಥವಾ 2019 ರಲ್ಲಿ 303 ಅಥವಾ 2022 ರಲ್ಲಿ 156 ಅಥಚಾ 2018 ರಲ್ಲಿ 104 ಸೀಟುಗಳು ಬರುತ್ತವೆ ಎಂದು ಭವಿಷ್ಯ ಹೇಳಿರಲಿಲ್ಲ.  2018 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 24 ಸಾವಿರ ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಈ ಬಾರಿ 31 ಸಾವಿರ ಬೂತ್‌ಗಳಲ್ಲಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಸಂಖ್ಯೆ ಎಷ್ಟು ಎಂಬುದನ್ನು ನೀವೇ ಊಹಿಸಿ ಎಂದು ಸಂತೋಷ್ ಟ್ವಿಟ್​ ಮಾಡಿದ್ದಾರೆ.

  1.  

Leave a Reply

Your email address will not be published. Required fields are marked *