Breaking News

ಅಸ್ನೋಟಿ, ಚಿತ್ತಾಕುಲ, ಶಿರವಾಡದಲ್ಲಿ ಶಾಸಕಿ ರೂಪಾಲಿ ಮಿಂಚಿನ ಮತಯಾಚನೆ

 

ಕಾರವಾರ:  ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿವೆ ಕ್ಷೇತ್ರದ ಜನರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಮತ್ತೊಮ್ಮೆ ಆಶೀರ್ವದಿಸಿ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು.

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಹಣಕೋಣ, ಅಸ್ನೋಟಿ, ಮುಡಗೇರಿ, ಮಾಜಾಳಿ, ಚಿತ್ತಾಕುಲ, ಶಿರವಾಡ ಹಾಗೂ ಕಿನ್ನರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರ ನಡೆಸಿ ಅವರು ಮಾತನಾಡಿದರು.

ಪಕ್ಷ ನೀಡಿರುವ ಜವಾಬ್ದಾರಿಯನ್ನು ಬದ್ಧತೆಯಿಂದ ಪಾಲಿಸಿದ್ದೇನೆ. ಜನರಿಗಾಗಿ ಶ್ರಮಿಸಿದ್ದೇನೆ. ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸಿದ್ದೇನೆ.  ಸಂಕಷ್ಟ ಎದುರಾದಾಗ ಮನೆಯಲ್ಲಿ ಕೂರದೆ‌ ಜನರಿಗಾಗಿ ಕ್ಷೇತ್ರದಲ್ಲಿ ಓಡಾಟ ಮಾಡಿದ್ದೇನೆ. ಅವರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ, ಇನ್ನೂ ಸಾಧಿಸುವುದು ಸಾಕಷ್ಟಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲಿದ್ದೇನೆ ಎಂದರು.

ನಮ್ಮ ಸರ್ಕಾರ ಮೀನುಗಾರರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವರ ಏಳಿಗೆಗೆ ಕ್ಷೇತ್ರದಲ್ಲಿ ಬಂದರು ನಿರ್ಮಿಸಲು ಮುಂದಾಗಿದೆ. ಮುಗ್ಧ ಮೀನುಗಾರರನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿದರು. ಅಂದಿನ ದಿನದಲ್ಲಿ‌ ಇದು ಯಾರಿಗೂ ತಿಳಿಯಲಿಲ್ಲ. ಎಲ್ಲವೂ ಶಾಂತವಾದ ಮೇಲೆ ಜನರಿಗೆ ನಿಜ ತಿಳಿಯಿತು. ಸಾಗರಮಾಲಾ ಯೋಜನೆಗೆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹಾಗೂ ಮಾಜಿ ಶಾಸಕರು ಸೇರಿ ಅಡಿಗಲ್ಲು ಸಮಾರಂಭ ನಡೆಸಿದ್ದರು. ಅದನ್ನು ನಮ್ಮ ಬಿಜೆಪಿ ಸರಕಾರದ ಮೇಲೆ ಹಾಕಿ ಮುಗ್ಧ ಮೀನುಗಾರರು ನಮ್ಮನ್ನು ದೂರುವಂತೆ ಮಾಡುವ ಸಂಚು ರೂಪಿಸಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟಾಗ ಮುಗ್ಧ ಮೀನುಗಾರರಿಗೆ ನಿಜವಾದ ಮೀನುಗಾರರ ವಿರೋಧಿ ಯಾರು ಎಂಬುದು ತಿಳಿಯಿತು ಎಂದರು.

  1.  

ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಮೀನುಗಾರರ ಕಷ್ಟವನ್ನು ಅರಿತು ಮೀನುಗಾರಿಕಾ ಮಂತ್ರಾಲಯವನ್ನೆ ನೀಡಿತು. ಮೋದಿ ಆಗಮಿಸಿದ್ದಾಗಲೂ ಕೂಡ ಮೀನುಗಾರರ ಹೆಸರು ಪ್ರಸ್ತಾಪಿಸಿದ್ದನ್ನು ತಾವು ಗಮನಿಸಿದ್ದೀರಿ ಎಂದರು.

ವಿಧಾನಪರಿಷತ್‌ ಶಾಸಕ ಗಣಪತಿ ಉಳ್ವೇಕರ ಮಾತನಾಡಿ, ಹಿಂದೆಂದೂ ಕಾಣದಂತಹ  ಅಭಿವೃದ್ಧಿ ಕ್ಷೇತ್ರದಲ್ಲಿ ಆಗಿವೆ. ಜನರಿಗಾಗಿ ರೂಪಾಲಿ ನಾಯ್ಕ ಹಗಲಿರುಳು ಕ್ಷೇತ್ರದಲ್ಲಿ ಓಡಾಡಿ ನಿಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ್ದಾರೆ. ಯಾವುದೇ ಗಲಾಟೆ ಇಲ್ಲದೆ ಐದು ವರ್ಷ ಆಡಳಿತವನ್ನು ಮಾಡಿದ್ದಾರೆ. ಬಿಜೆಪಿ ಸರ್ಕಾರ ನನ್ನಂತ ಸಾಮಾನ್ಯನನ್ನು ವಿಧಾನಪರಿಷತ್‌ ಗೆ ಆಯ್ಕೆ ಮಾಡಿದೆ. ಮೀನುಗಾರ ಸಮುದಾಯಕ್ಕೆ ಇದೊಂದು ಹೆಮ್ಮೆಯ ವಿಷಯ. ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ ಅಭೂತಪೂರ್ವವಾಗಿ ಗೆಲ್ಲಿಸಬೇಕು ಎಂದರು.

ಬಿಜೆಪಿ ತತ್ವ ಸಿದ್ಧಾಂತ ಹಾಗೂ ರೂಪಾಲಿ ನಾಯ್ಕ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು

ಸುನೀಲ ಕೊಠಾರಕರ, ದಿನೇಶ ಬಾಂದೇಕರ, ರಾಮು ಬಾಂದೇಕರ, ಪ್ರೇಮಾನಂದ ಪೆಡ್ನೇಕರ ಹಾಗೂ ಅನೇಕರು ಬಿಜೆಪಿ ತತ್ವ ಸಿದ್ಧಾಂತಗಳನ್ನು ಹಾಗೂ ರೂಪಾಲಿ ನಾಯ್ಕ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಗ್ರಾಮೀಣ ಬಿಜೆಪಿ ಅಧ್ಯಕ್ಷ ಸುಭಾಷ ಗುನಗಿ, ಸುಷ್ಮಾ ಗುರವ, ಪ್ರಮುಖರಾದ ಹರೀಶ ನಾಗೇಕರ, ಗಿರೀಶ ನಾಯ್ಕ, ಗೋಕುಲದಾಸ ಗುನಗಿ, ಗುರುನಾಥ ನಾಗೇಕರ, ಅಶ್ವಿನಿ ನಾಯ್ಕ, ದಿಲೀಪ ನಾಯ್ಕ, ಉಮೇಶ ಗೌಡ, ಕಾಂಚನಾ ನಾಯ್ಕ, ರಜನಿ‌ ನಾಗೇಕರ, ವಿನಾಯಕ ಮಹೇಕರ, ಮನೋಜ ಗಾಂವಕರ, ವಿಲಾಸ ನಾಯ್ಕ, ಮನೋಜ ನಾಯ್ಕ, ಸತೀಶ ಅರಗೇಕರ,  ಸುರೇಂದ್ರ ಬಾಂದೇಕರ, ಶ್ವೇತಾ ದೇಸಾಯಿ, ಸೂರಜ್ ದೇಸಾಯಿ, ಚಂದನ್ ಸಾವಂತ್, ಪ್ರೇಮಾನಂದ ಕೊಬ್ರೆಕರ, ನಂದಕಿಶೋರ, ಸುರೇಂದ್ರ, ಸುನೀಲ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com