Breaking News

ಕೇರಳ ಮಲಪ್ಪುರಂ ಜಿಲ್ಲೆಯ ತಾನೂರು ಬಳಿ ಬೋಟ್ ಪಲ್ಟಿ: 15 ಮಂದಿ ದುರ್ಮರಣ

 

ಕೇರಳ: ಮಲಪ್ಪುರಂ ಜಿಲ್ಲೆಯ ತಿರೂರು ತಾಲೂಕಿನ ತಾನೂರ್​ ಬಳಿ ಬೋಟ್ ವೊಂದು ಪಲ್ಟಿ ಹೊಡೆದ ಪರಿಣಾಮ ಆರು ಮಂದಿ ಮಕ್ಕಳು, ಮಹಿಳೆಯರು ಸೇರಿದಂತೆ 15 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಸಚಿವ ವಿ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.

  1.  

30ರಿಂದ 40 ಕ್ಕೂ ಹೆಚ್ಚು ಪ್ರವಾಸಿಗರಿದ್ದ ಬೋಟ್ ಪಲ್ಟಿಯಾಗಿ ಈ ದುರಂತವು ಸಂಭವಿಸಿದೆ. ದುರಂತದಲ್ಲಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಗ್ನಿಶಾಮಕ ದಳ, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ತೂವಲ್ ತೀರ್ಥಂ ಪ್ರವಾಸಿ ತಾಣದ ಪುರಪೂಜಾ ನದಿಯಲ್ಲಿ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಸುಮಾರು 10 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬೋಟ್​ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಜೀವ ರಕ್ಷಕ ಸಾಧನಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ದೋಣಿ ದಡದಿಂದ 300 ಮೀಟರ್​ ದೂರಲ್ಲಿತ್ತು. ದೋಣಿಯಲ್ಲಿದ್ದ ಪ್ರಯಾಣಿಕರು ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ಮತ್ತು ತನೂರ್ ಪ್ರದೇಶಗಳಿಗೆ ಸೇರಿದವರು ಎಂದು ಗುರತಿಸಲಾಗಿದೆ. ಇಲ್ಲಿನ ಮನರಂಜನಾ ದೋಣಿ ಸೇವೆಗಳಿಗೆ ಸಂಜೆ 5 ರವರೆಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಆದರೆ ನಿಯಮ ಮೀರಿ ದೋಣಿ ಕಾರ್ಯಾಚರಣೆ ಮಾಡುತ್ತಿದ್ದವು ಎಂದು ತಿಳಿದು ಬಂದಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com