Breaking News

ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕರಸೇವಕರ ಸಿಂಹಪಾಲು: ಸಿಎಂ ಯೋಗಿ ಆದಿತ್ಯನಾಥ್

 

ಉಡುಪಿ (ಕಾರ್ಕಳ): ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯವು 2024 ಜನವರಿಗೆ ಪೂರ್ಣಗೊಳ್ಳಲಿದೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕರ್ನಾಟಕದ ಕರಸೇವಕರ ಪಾತ್ರ ಮಹತ್ವದ್ದು,  ಪ್ರಭು ರಾಮನ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕದ ಜನತೆಯ ಬಹಳ ಶ್ರದ್ಧಾಪೂರ್ವಕವಾಗಿ ಆಮಂತ್ರಿಸಲು ಬಂದಿದ್ದೇನೆ. ಕರ್ನಾಟಕದ ರಾಮಭಕ್ತರಿಗಾಗಿ ಅಯೋಧ್ಯೆಯಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಗೆಸ್ಟ್ ಹೌಸ್ ನಿರ್ಮಾಣಕ್ಕಾಗಿ ಸ್ಥಳ ಖರೀದಿ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

ಕಾರ್ಕಳದಲ್ಲಿ ಶನಿವಾರ ಅಭ್ಯರ್ಥಿ ಸುನಿಲ್ ಕುಮಾರ್ ಅವರ ಪರ ನಡೆದ ರೋಡ್ ಶೋನಲ್ಲಿ ಅವರು ಮಾತನಾಡಿದರು.

  1.  

ರಾಮನ ಬಂಟ ಹನುಮಂತ ಲಂಕೆಗೆ ಹಾರಿ ರಾವಣನ ಇಡೀ ಸಾಮ್ರಾಜ್ಯವನ್ನು ನಾಶಗೊಳಿಸಿದ ಹಾಗೆ ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಅನ್ನು ಬಿಜೆಪಿ ಕಾರ್ಯಕರ್ತರು ಧೂಳಿಪಟ ಮಾಡಿ, ಮತ್ತೊಮ್ಮೆ ಡಬಲ ಎಂಜಿನ್ ಸರಕಾರ ತರಬೇಕಾಗಿದೆ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಡಬಲ್ ಎಂಜಿನ್ ಸರಕಾರ ಖಂಡಿತವಾಗಿ ಅಧಿಕಾರಕ್ಕೆ  ಬರಲಿದೆ. ಈ ಸರಕಾರವನ್ನು ತಡೆಯಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಅದ್ದರಿಂದ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾರ್ಕಳ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಕುಡುಪುಲಾಜೆ, ಬಿಜೆಪಿಯ ಹಿರಿಯ ಮುಖಂಡ ರುಗಳಾದ ಬೋಳ ಪ್ರಭಾಕರ್ ‌ಕಾಮತ್, ಎಂ ಕೆ ವಿಜಯ ಕುಮಾರ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com