Breaking News

ಹೀಗಿದೆ ನಿಮ್ಮ ಗುರುವಾರದ ರಾಶಿಫಲ

 

ಮೀನ ರಾಶಿಯವರ ಆದಾಯದಲ್ಲಿ ಏರಿಕೆ ಉಂಟಾಗುವ ಸಾಧ್ಯತೆಯಿದೆ. ಮಿಥುನ ರಾಶಿಯವರು ನೀವು ಅತಿಯಾಗಿ ನಂಬಿದ ನಿಮ್ಮ ಸ್ನೇಹಿತರು ನಿಮ್ಮ ನಂಬಿಕೆ ಕಳೆದುಕೊಳ್ಳಲಿದ್ದಾರೆ.

ಮೀನ: ನಿಮ್ಮ ಆದಾಯದಲ್ಲಿ ಏರಿಕೆ ಉಂಟಾಗುವ ಸಾಧ್ಯತೆಯಿದೆ. ಆದರೆ ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಬಾಧಿಸಬಹುದು. ಇಂದು ನೀವು ಮಾಡಿದ ಎಲ್ಲಾ ಕೆಲಸಗಳಲ್ಲಿಯೂ ಲಾಭ ನಿರೀಕ್ಷಿಸಬಹುದಾಗಿದೆ.

ಮಿಥುನ: ನೀವು ಅತಿಯಾಗಿ ನಂಬಿದ ನಿಮ್ಮ ಸ್ನೇಹಿತರು ನಿಮ್ಮ ನಂಬಿಕೆ ಕಳೆದುಕೊಳ್ಳಲಿದ್ದಾರೆ. ತಾಯಿ ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುವಂತಹ ಘಟನೆ ನಡೆಯಲಿದೆ.

ಧನು : ಗಂಡನ ಮನೆಯವರ ನಡವಳಿಕೆಯು ನಿಮಗೆ ಇರಿಸು ಮುರಿಸು ಉಂಟು ಮಾಡುವ ಸಾಧ್ಯತೆಯಿದೆ. ಆದರೆ ಯಾವುದೇ ಕ್ಷಣದಲ್ಲಿಯೂ ತಾಳ್ಮೆ ಕಳೆದುಕೊಳ್ಳಬೇಡಿ.

ಮಕರ : ಶೀಘ್ರದಲ್ಲಿಯೇ ನಿಮಗೆ ಧನಾಗಮನದ ನಿರೀಕ್ಷೆಯಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ಕಚೇರಿಯಲ್ಲಿ ನಿಮ್ಮ ಮಾತಿಗೆ ಹೆಚ್ಚು ಮನ್ನಣೆ ಸಿಗಲಿದೆ.

ಕುಂಭ : ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ಇಂದು ನೀವು ಅತ್ಯಂತ ಜಾಗ್ರತೆಯಿಂದ ಇರಬೇಕು. ಇಲ್ಲವಾದಲ್ಲಿ ನಿಮಗೆ ಸಂಕಷ್ಟ ಕಾದಿದೆ. ನಿಮ್ಮ ಮಾತೇ ನಿಮಗೆ ಅನೇಕ ಸಂದರ್ಭಗಳಲ್ಲಿ ಮುಳುವಾಗುವ ಸಾಧ್ಯತೆಯಿದೆ.

  1.  

ಮೇಷ: ಇಂದು ನೀವು ಇತರರಿಗೆ ಸಹಾಯ ಮಾಡಲಿದ್ದೀರಿ. ಇದರಿಂದ ನಿಮ್ಮಲ್ಲಿ ಸಾರ್ಥಕ ಭಾವ ಮೂಡಲಿದೆ. ಸಂಗಾತಿಯೊಂದಿಗಿನ ವಿರಸ ಮುಂದುವರಿಯಲಿದೆ

ವೃಷಭ : ಉದ್ಯೋಗದಲ್ಲಿ ನಿಮಗೆ ಮೇಲಿನ ಹುದ್ದೆ ಸಿಗುವ ಸಾಧ್ಯತೆಯಿದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಕೆಲವೊಂದು ವಿಚಾರದಲ್ಲಿ ನೀವು ಸುಮ್ಮನೇ ಇನ್ನೊಬ್ಬರೊಂದಿಗೆ ವೈಮನಸ್ಯ ಮೂಡಿಸಿಕೊಳ್ಳಲಿದ್ದೀರಿ .

ಕಟಕ : ಇಂದು ನೀವು ರಾಜಕೀಯ ರಂಗದಲ್ಲಿ ಇರುವವರ ಜೊತೆ ಸಂಪರ್ಕ ಸಾಧಿಸಲಿದ್ದೀರಿ. ಇದರಿಂದ ನಿಮ್ಮ ಭೂಮಿಯ ವ್ಯಾಜ್ಯವೊಂದನ್ನು ಬಗೆಹರಿಸಲು ಹೊಸ ಮಾರ್ಗವೊಂದು ಸಿಗಲಿದೆ. ನೀವು ಬಹಳದಿನಗಳಿಂದ ಮುಚ್ಚಿಟ್ಟುಕೊಂಡಿದ್ದ ರಹಸ್ಯ ಬಯಲಾಗಲಿದೆ.

ತುಲಾ : ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಹುಡುಕಿಕೊಂಡು ಬರಲಿದೆ. ಆದರೆ ದೂರದ ಊರಿನಲ್ಲಿ ಕೆಲಸ ದೊರೆತ ಕಾರಣ ಮತ್ತೆ ದ್ವಂದ್ವಕ್ಕೆ ಸಿಲುಕಲಿದ್ದೀರಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೈಯಕ್ತಿಕ ಜೀವನದಲ್ಲಿ ಸುಖ – ಸಂತೋಷ ಹೆಚ್ಚಲಿದೆ.

ವೃಶ್ಚಿಕ : ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಇದರಿಂದ ಮನೆಯವರಿಗೂ ನೆಮ್ಮದಿ ಎನಿಸಲಿದೆ. ಸ್ನೇಹಿತರಿಂದ ಆರ್ಥಿಕ ಬೆಂಬಲ ನಿರೀಕ್ಷಿಸಬಹುದಾಗಿದೆ.

ಸಿಂಹ : ಇಂದು ನಿಮಗೆ ಅನಿರೀಕ್ಷಿತ ಧನಲಾಭ ಪ್ರಾಪ್ತಿಯಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಿದ ನೀವು ಅತಿಯಾಗಿ ದಣಿಯಲಿದ್ದೀರಿ. ಕಚೇರಿಯಲ್ಲಿ ಯಾವುದೇ ಕಿರಿಕಿರಿ ಇರೋದಿಲ್ಲ.

ಕನ್ಯಾ : ಸಂಗಾತಿಯಿಂದ ಮಾನಸಿಕ ಕಿರಿಕಿರಿ ಇರಲಿದೆ. ಸ್ನೇಹಿತರು ನಿಮ್ಮ ಕಷ್ಟಕ್ಕೆಲ್ಲ ನೆರವಾಗಲಿದ್ದಾರೆ. ವ್ಯಾಪಾರಸ್ಥರಿಗೆ ಈ ದಿನ ಶುಭದಿನವಾಗಿದೆ. ಇಂದು ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com