Breaking News

ಡಿಕೆಸಿ ಹೆಲಿಕಾಪ್ಟರ್ ಅಲ್ಲಾಡಿಸಿದ್ದು ಯಾರು, ತಿಳಿದುಕೊಳ್ಳಿ: ವೇದವ್ಯಾಸ್ ಕಾಮತ್

 

ಮಂಗಳೂರು: ಹನುಮಂತ ಲಂಕೆ ನಿರ್ನಾಮ ಮಾಡಿದಂತೆ, ಕಾಂಗ್ರೆಸ್ ಕೂಡ ನಿರ್ನಾಮವಾಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಬ್ಯಾನ್ ಮಾಡ್ತಾರೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಖಂಡಿಸಿ ಮಂಗಳೂರಿನ ಹಳೆಕೋಟೆ ಮುಖ್ಯಪ್ರಾಣ ದೇವಾಲಯದಲ್ಲಿ ಬಜರಂಗದಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಹನುಮಾನ್ ಚಾಲೀಸ ಪಠಣ ಮಾಡಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,

  1.  

ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಅನುಕಂಪ ಬರುತ್ತದೆ. 500 ಜನರನ್ನು ಕೊಲ್ಲಲು ಬಂದ ಬಾಂಬರ್ ಕಾಂಗ್ರೆಸ್‌ ನವರಿಗೆ ಅಮಾಯಕ ಆಗ್ತಾನೆ. ಆದರೆ ಆರ್ ಎಸ್ ಎಸ್ ಅಧೀನದಲ್ಲಿ ದೇಶಭಕ್ತ ಸಂಘಟನೆ ಆಗಿರುವ ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಾಡಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಜನರು ನಿಮ್ಮನ್ನು ಬ್ಯಾನ್ ಮಾಡಿದ್ದಾರೆ ಎಂದರು.

ಕರ್ನಾಟಕದಲ್ಲಿ ಕೂಡ ನೀವು ಬ್ಯಾನ್ ಆಗುತ್ತೀರಿ.  ಬಜರಂಗದಳ ಪ್ರಸ್ತಾಪ ಮಾಡಿದ ಕೂಡಲೇ ಯಾವ ರೀತಿ ಹೆಲಿಕ್ಯಾಪ್ಟರ್ ಅಲ್ಲಾಡಿದೆ ಎಂಬುದು ನೋಡಿದ್ದೇವೆ. ಪ್ರವೀಣ್ ನೆಟ್ಟಾರ್ ಹತ್ಯೆ ಆದಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಕಾರು ಅಲ್ಲಾಡಿತ್ತು. ರಾಜ್ಯಾಧ್ಯಕ್ಷರ ಕಾರನ್ನು ಕಾರ್ಯಕರ್ತರೇ ಅಲ್ಲಾಡಿಸಿದ್ದು. ಡಿ.ಕೆ. ಶಿವಕುಮಾರ್ ಅವರ ವಿಮಾನವನ್ನು ಅಲ್ಲಾಡಿಸಿದ್ದು ಯಾರು ಎಂಬುದನ್ನು ಡಿಕೆಶಿ ತಿಳಿದುಕೊಳ್ಳಬೇಕು ಎಂದರು.

ಮಂಗಳೂರಿನ ಹತ್ತಕ್ಕೂ ಅಧಿಕ ಆಂಜನೇಯ ದೇವಸ್ಥಾನ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ದೇವಸ್ಥಾನಗಳಲ್ಲಿ ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com