Breaking News

ಗಾಂಧಿಜಿ ಮೊಮ್ಮಗ ಅರುಣ್ ಗಾಂಧಿ ನಿಧನ

 

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ  ಮೊಮ್ಮಗ ಅರುಣ್ ಗಾಂಧಿ ಮಂಗಳವಾರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿಧನರಾದರು.

  1.  

ಅವರಿಗೆ 89 ವರ್ಷವಾಗಿದ್ದು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅರುಣ್ ಗಾಂಧಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕೊಲ್ಹಾಪುರದಲ್ಲಿ ಮಂಗಳವಾರ ನಡೆಯಿತು. ಪುತ್ರ ತುಷಾರ್ ಗಾಂಧಿ ಅಂತ್ಯಕ್ರಿಯೆ ನೆರವೇರಿಸಿದರು.

ಅರುಣ್ಗಾಂಧಿ ಅವರು 1934 ಏಪ್ರಿಲ್ 14 ರಂದು ದರ್ಬಾನ್ ನಲ್ಲಿ  ಮಣಿಲಾಲ್ ಗಾಂಧಿ ಹಾಗೂ ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದರು. ಸಾಹಿತಿ ಹಾಗೂ ಸಾಮಾಜಿಕರಾಜಕೀಯ ಹೋರಾಟಗಾರನಾಗಿ ಅರುಣ್ಗಾಂಧಿ ಅವರು ಗಮನ ಸೆಳೆದಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com