Breaking News

ಪಬ್ಬಾಸ್ ಗೆ ರಾಹುಲ್ ಗಾಂಧಿ: ಕರಾವಳಿ ಐಸ್ ಕ್ರೀಂ ರುಚಿಗೆ ಫಿದಾ

 

ಮಂಗಳೂರು: ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಹಾಗೂ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಮಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ನಗರದ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ಸವಿದರು.

ಮಂಗಳೂರು ನಗರ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಎದುರಿನ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಅಲ್ಲಿಂದ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾತ್ರಿ ಬಿಗಿ ಭದ್ರತೆಯೊಂದಿಗೆ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ತೆರಳಿ ಐಸ್ ಕ್ರೀಮ್ ಸವಿದರು.

  1.  

ಐಡಿಯಲ್ ಐಸ್ ಕ್ರೀಮ್ ತರಹೇವಾರಿ ಐಸ್ ಕ್ರೀಮ್ ಸವಿದ ರಾಹುಲ್ ಗಡಬಡ್, ಚಾಕುಲೇಟ್ ಡ್ಯಾಡ್, ಪಾನ್ ಐಸ್ ಕ್ರೀಂ, ಸಿರಾಮುಸ್ ಸೇರಿದಂತೆ ಹಲವು ಪ್ಲ್ಯಾವರ್ಡ್ ಐಸ್ ಕ್ರೀಂಗಳನ್ನು ಖುಷಿಯಿಂದ ಸೇವನೆ ಮಾಡಿದರು. ಎಲ್ಲ ಐಸ್ ಕ್ರೀಂ ಗಳಿಗಿಂತ್ ಗಡಬಡ್ ಹಾಗೂ ಚಾಕಲೇಟ್ ಡ್ಯಾಡ್ ತುಂಬಾ ಇಷ್ಟವಾಯಿತು ಎಂದು ತಮ್ಮ ಜತೆಗೆ ಇದ್ದ ಮುಖಂಡರಿಗೆ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ  ಇದ್ದರು.

ರಾಹುಲ್ ಗಾಂಧಿ ಅವರ ಜತೆಗೆ ಸೆಲ್ಫಿಗಾಗಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ನಲ್ಲಿ ಇದ್ದ ಜನರು ಮುಗಿಬಿದ್ದರು. ರಾಹುಲ್ ಕೂಡ ಜನರ ಸೆಲ್ಫಿಗೆ ಫೋಸು ನೀಡಿದರು..

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com