Breaking News

ಟಿವಿ 9, ಸಿವೋಟರ್ ಜಂಟಿ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುಂದೆ

 

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಟಿವಿ 9 ಹಾಗೂ ಸಿ ವೋಟರ್ ಜಂಟಿ ಆಗಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು ಸರಳ ಬಹುಮತ ಪಡೆಯಲಿದೆ ಎಂದು ಹೇಳಿದೆ.    

ಪ್ರತಿಪಕ್ಷ ಕಾಂಗ್ರೆಸ್ ಗರಿಷ್ಠ ಶೇ 40 ಸ್ಥಾನ ಹಂಚಿಕೆ ಪಡೆಯುವ ನಿರೀಕ್ಷೆ ಇದೆ. ಅನಂತರ ಆಡಳಿತಾರೂಢ ಬಿಜೆಪಿ ಶೇ. 33.9 ಹಾಗೂ ಜೆಡಿಎಸ್ ಶೇ. 18.8 ಸ್ಥಾನ ಹಂಚಿಕೆ ಪಡೆವ ನಿರೀಕ್ಷೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

2018 ವಿಧಾನ ಸಭೆಚುನಾವಣೆಯಲ್ಲಿ ಶೇ 38ರಷ್ಟು  ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಬಾರಿ ಶೇ 2 ರಷ್ಟು  ಹೆಚ್ಚು ಮತ ಗಳಿಕೆ ಪ್ರಮಾಣ ಸುಧಾರಣೆ ಕಂಡಿದೆ ಎಂದು ಸಮೀಕ್ಷೆ ತಿಳಿಸಿದೆ

  1.  

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಶೇ 36 ಮತ ಹಂಚಿಕೆ ಪಡೆದಿದ್ದ ಬಿಜೆಪಿ  ಬಾರಿ ಚುನಾವಣೆಯಲ್ಲಿ ಶೇ33.9ಕ್ಕೆ ಕುಸಿಯಲಿದೆ ಎಂದು ಸಿವೋಟರ್ ತಿಳಿಸಿದೆ. ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಮತ ಹಂಚಿಕೆಯನ್ನು  ಶೇ 18 ರಿಂದ ಶೇ 18.8 ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಸ್ಪಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲಿದೆಇತರ ಪಕ್ಷಗಳು 2018 ವಿಧಾನ ಸಭೆ ಚುನಾವಣೆಯಲ್ಲಿ  ಶೇ 8 ಮತ ಹಂಚಿಕೆ ಪಡೆದಿದ್ದು, ಬಾರಿ  ಶೇ 7.3 ಮತ ಹಂಚಿಕೆ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ

2018 ವಿಧಾನಸಭೆ  ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆಯುವುದರೊಂದಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಲ್ಲದೆ, ಸರಳ ಬಹುಮತಕ್ಕೆ 8 ಸ್ಥಾನಗಳ ಕೊರತೆ ಉಂಟಾಗಿತ್ತು

ಬಾರಿ ಕಾಂಗ್ರೆಸ್ 106 ರಿಂದ 116 ಸ್ಥಾನಗಳನ್ನು ಪಡೆವ ನಿರೀಕ್ಷೆ ಇದೆ. ಬಿಜೆಪಿ 79ರಿಂದ 89 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಜೆಡಿಎಸ್ನಲ್ಲಿ ಕೂಡ ಸ್ಥಾನ ಹಂಚಿಕೆಯಲ್ಲಿ ಇಳಿಕೆಯಾಗುವ  ನಿರೀಕ್ಷೆ ಇದೆ. ಜೆಡಿಎಸ್ 24 ರಿಂದ 34 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಇತರ ಪಕ್ಷಗಳು 0 ಯಿಂದ 5 ಸ್ಥಾನಗಳನನ್ನು ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಕಾಂಗ್ರೆಸ್ ಮ್ಯಾಜಿಕ್ ನಂಬರ್ 113ರನ್ನು ದಾಟದೇ ಇರಬಹುದು ಅಥವಾ 113 ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲುಬಹುದು ಎಂದು ಸಮೀಕ್ಷೆ ಹೇಳಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com