Breaking News

ಬಿಜೆಪಿಗೆ 150 ಸ್ಥಾನ ಖಚಿತ: ನಳಿನ್ ಕುಮಾರ್ ಕಟೀಲ್

 

ಮಂಗಳೂರು: ರಾಜ್ಯದಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪೂರ್ಣ ಬಹುಮತದ ಸರಕಾರ ಆಡಳಿತಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.  

ಮಂಗಳವಾರ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರ ಪರವಾಗಿ ಬಿಜೈ, ದೇರೆಬೈಲ್ ದಕ್ಷಿಣ, ಕಂಕನಾಡಿ, ಅಳಪೆ, ಜಪ್ಪಿನಮೊಗರು ಹಾಗೂ ಬೋಳಾರದಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

  1.  

ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಜನಪರ ಆಡಳಿತ ನೀಡಿದ ಬಿಜೆಪಿ ಸರಕಾರದ ಪರ ಮತದಾರ ಒಲವು ತೋರಿಸುತ್ತಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಜನರೇ ಮುನ್ನುಡಿ ಬರೆಯಲಿದ್ದಾರೆ. ಬಿಜೆಪಿಯ ಅಭಿವೃದ್ಧಿ ಓಟಕ್ಕೆ ಜನತೆ ಸಾಥ್ ನೀಡಿದ್ದಾರೆ ಎಂದರು,

ಬಿಜೆಪಿ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಚುನಾವಣಾ ಕ್ಷೇತ್ರ ಸಂಚಾಲಕ ನಿತಿನ್ ಕುಮಾರ್, ಸಹ ಸಂಚಾಲಕರಾದ ಜಿತೇಂದ್ರ ಕೊಟ್ಟಾರಿ, ರಮೇಶ್ ಹೆಗ್ಡೆ, ದೀಪಕ್ ಪೈ, ಕಿರಣ್ ರೈ, ಅಜಯ್ ಕುಲಶೇಖರ, ಪಾಲಿಕೆ ಸದಸ್ಯರಾದ ವೀಣಾ ಮಂಗಳ, ರೇವತಿ ಶ್ಯಾಮ್ ಸುಂದರ್, ಭಾನುಮತಿ, ಶೋಭಾ ಪೂಜಾರಿ, ಪ್ರಮುಖರಾದ ಪ್ರಶಾಂತ್ ಆಳ್ವ, ವಿನಯ್ ನೇತ್ರಾ, ರಘುವೀರ್ ಬಾಬುಗುಡ್ಡೆ, ಪ್ರಜ್ವಲ್ ಚಿಲಿಂಬಿ, ಉಮಾನಾಥ್ ಅಮೀನ್, ಗಂಗಾಧರ್ ಕೋಟ್ಯಾನ್  ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com