
ಬೆಂಗಳೂರು: ಕಾಂಗ್ರೆಸ್ 5 ನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ತೀವ್ರ ಕುತೂಹಲ ಕೇರಳಿಸಿರುವ ಮಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಈ ಪಟ್ಟಿಯಲ್ಲಿಯೂ ಹೆಸರು ಘೋಷಣೆ ಮಾಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹಾಗೂ ಇನಾಯತ್ ಅಲಿ ನಡುವೆ ತೀವ್ರ ಪೈಪೋಟಿ ಇದ್ದು, ಪ್ರತಿಷ್ಠೆಯ ಕ್ಷೇತ್ರವಾಗಿದೆ. ಇವರಿಬ್ಬರ ಜತೆಗೆ ಇನ್ನೂ ಕೂಡ ಹಲವರು ಆಕಾಂಕ್ಷಿಗಳು ಇದ್ದಾರೆ. ಏ20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಹೀಗಾಗಿ ಆಕಾಂಕ್ಷಿಗಳಲ್ಲಿ ತೀವ್ರ ನಿರಾಶೆ ಉಂಟಾಗಿದೆ. ಇನ್ನೂ ಒಂದು ಮೂಲದ ಪ್ರಕಾರ ಇನಾಯತ್ ಅಲಿ ಅವರಿಗೆ ಟಿಕೆಟ್ ಪಕ್ಕಾ ಆಗಿದೆ ಎಂಬ ಸುದ್ದಿ ಇದೆ. ಆದರೆ ಅಧಿಕೃತ ಪಟ್ಟಿ ಬಿಡುಗಡೆಯ ನಂತರವೇ ಇದು ಗೊತ್ತಾಗಲಿದೆ.
ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಶಿಗ್ಗಾಂವ ಕ್ಷೇತ್ರಕ್ಕೆ ಮುಹಮ್ಮದ್ ಯೂಸುಫ್ ಸವಣೂರು ಬದಲು ಯಾಸಿರ್ ಅಹ್ಮದ್ ಖಾನ್ ಫಠಾಣ್ ಹೆಸರು ಅಂತಿಮಗೊಳಿಸಲಾಗಿದೆ. ಪುಲಕೇಶಿ ನಗರ– ಎ. ಸಿ ಶ್ರೀನಿವಾಸ್, ಮುಳಬಾಗಿಲು, ಡಾ. ಮುದ್ದು ಗಂಗಾಧರ, ಕೆ ಆರ್ ಪುರಕ್ಕೆ ಡಿ.ಕೆ. ಮೋಹನ್ ಹೆಸರನ್ನು ಘೋಷಣೆ ಮಾಡಲಾಗಿದೆ. ಇನ್ನೂ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿ ಇದ್ದು, ಗುರುವಾರ ಮಧ್ಯಾಹ್ನ ಘೋಷಣೆ ಆಗಲಿದೆ ಎಂದು ತಿಳಿದು ಬಂದಿದೆ.


