
ಕಾರವಾರ: ಕಾರವಾರ– ಅಂಕೋಲಾ ಕ್ಷೆತ್ರದ ಕಾಂಗ್ರೆಸ್ ಟಿಕೆಟಿಗೆ ಪ್ರಭಲ ಸ್ಪರ್ಧೆಯಲ್ಲಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಆಗಿದ್ದ ಜೈತ್ರಾ ಕೊಠಾರಕರ್ ಅವರು ಕೈಟಿಕೆಟ್ ಕೈತಪ್ಪಿದಕ್ಕೆ ಮುನಿಸಿಕೊಂಡು ತೆನೆ ಹೊತ್ತ ಮಹಿಳೆ ಕೈ ಹಿಡಿದಿದ್ದಾರೆ. ಕ್ಷೇತ್ರದಲ್ಲಿ ದಿನವೂ ಸುದ್ದಿಯಲ್ಲಿ ಇರುತ್ತಿದ್ದ ಚೈತ್ರಾ ಅವರು ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರ್ ಸ್ವಾಮಿ ಅವರು ಚೈತ್ರಾ ಅವರಿಗೆ ಸ್ಪರ್ಧೆಗೆ ಬಿ ಫಾರಂ ಕೂಡ ನೀಡಿದ್ದು 17 ಅಥವಾ 18 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಅಂಕೋಲಾ– ಕಾರವಾರ ಕ್ಷೇತ್ರದಲ್ಲಿ ಈಗ ತ್ರಿಕೋನ ಸ್ಪರ್ಧೆ ಎರ್ಪಡುವ ಎಲ್ಲ ಲಕ್ಷಣ ಕಾಣುತ್ತಿದೆ. ಜೆಡಿಎಸ್ ಪಕ್ಷಕ್ಕೆ ಈಗ ಒಬ್ಬ ಅಭ್ಯರ್ಥಿ ಸಿಕ್ಕಂತೆ ಆಗಿದೆ. ಪಕ್ಷವು ತನ್ನದೆ ಆದ ಮತಬ್ಯಾಂಕ್ ಹೊಂದಿರುವುದು ಚೈತ್ರಾ ಅವರಿಗೆ ಮತ್ತಷ್ಟು ಕಾರ್ಯಕರ್ತರ ಪಡೆ ಸಿಕ್ಕಂತೆ ಆಗಿದೆ.
ಚೈತ್ರಾ ಅವರು ಈಗಾಗಲೇ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಸಲುವಾಗಿ ಕ್ಷೇತ್ರದಲ್ಲಿ ಒಂದು ಸುತ್ತು ರೌಂಡ್ ಹಾಕಿದ್ದು, ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಚೈತ್ರಾ ಅವರು ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದಾಗ ತಮ್ಮದೇ ವಿಶಿಷ್ಟ ಕಾರ್ಯ ಶೈಲಿ ಹೊಂದಿರುವುದರಿಂದ ಕ್ಷೇತ್ರದಲ್ಲಿ ಉತ್ತಮ ಸಂಭಂದ ಕೂಡ ಇಟ್ಟುಕೊಂಡಿದ್ದು, ಕಾಂಗ್ರೆಸ್ ಟಿಕೆಟ್ ಸಿಗದೇ ಇರುವುದರಿಂದ ಕಾಂಗ್ರೆಸ್ ವಿರುದ್ಧ ಸಿಡಿದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗದ್ದಾರೆ. ಚೈತ್ರಾ ಅವರ ಪರ ಚುನಾವಣಾ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ಜಡಿಎಸ್ ನ ಹಲವು ನಾಯಕರು ಪ್ರಚಾರಕ್ಕೆ ಬರಲಿದ್ದು, ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದಾರೆ.

ಪಕ್ಷೇತರವಾಗಿ ಸ್ಪರ್ಧೆ ಮಾಡುವುದಕ್ಕಿಂತ ಒಂದು ಪಕ್ಷದ ಚಿನ್ಹೆಯಿಂದ ಸ್ಪರ್ಧೆ ಮಾಡುವುದು ಗೆಲುವಿಗೆ ಸಹಕಾರಿ ಆಗಲಿದೆ ಎಂಂದುಕೊಂಡು ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷಕ್ಕೆ ನನ್ನನ್ನು ಆಹ್ವಾನಿಸಿದರು. ಅದಕ್ಕಾಗಿ ಬೆಂಗಳೂರಿಗೆ ಬಂದು ಪಕ್ಷಕ್ಕೆ ಸೇರ್ಪಡೆ ಆಗಿದ್ದೇನೆ. ಅವರು ಬಿ ಫಾರಂ ನೀಡಿ ಆಶೀರ್ವದಿಸಿದ್ದಾರೆ. ಈಗ ಮತ್ತಷ್ಟು ಶಕ್ತಿ ಬಂದಂತೆ ಆಗಿದೆ ಎಂದು ಜೆಡಿಎಸ್ ಅಧಿಕೃತ ಅಭ್ಯರ್ಥಿ ಚೈತ್ರಾ ಕೊಠಾರಕರ್ ಹೇಳಿದರು.


