Breaking News

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಶೇ 76 ರಷ್ಟು ಜನದಟ್ಟಣೆ

 

ಮಂಗಳೂರು: ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ), ರಾಜ್ಯದ 2ನೇ ಅತ್ಯಂತ ಜನದಟ್ಟಣೆ ಹೊಂದಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ 17,94,054 ಪ್ರಯಾಣಿಕರು ಬಂದು, ಹೋಗಿದ್ದು, ಕಳೆದ ವರ್ಷಕ್ಕಿಂತ  ಶೇ 76 ಬೆಳವಣಿಗೆ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.

2021-22ರಲ್ಲಿ ವಿಮಾನ ನಿಲ್ದಾಣದಿಂದ 10,16,559 ಪ್ರಯಾಣಿಕರ ದಟ್ಟಣೆ ನಿಭಾಯಿಸಲಾಗಿತ್ತು. ನಿರ್ವಹಿಸಿದ 17.94 ಲಕ್ಷ ಪ್ರಯಾಣಿಕರಲ್ಲಿ, 12.08 ಲಕ್ಷ ಪ್ರಯಾಣಿಕರು ದೇಶೀಯ ಮತ್ತು ಉಳಿದ 5.86 ಲಕ್ಷ ಪ್ರಯಾಣಿಕರು ಗಲ್ಫ್  ದೇಶದ ಪ್ರಯಾಣಿಕರು.

  1.  

2022-23 ಅವಧಿಯಲ್ಲಿ 14,475 ವಿಮಾನಗಳ ಹಾರಾಟವನ್ನು ನಿರ್ವಹಿಸಲಾಗಿದೆ. ಶೇ 42 ರಷ್ಟು  ಬೆಳವಣಿಗೆ ದಾಖಲಿಸಿದೆ. ಇವುಗಳಲ್ಲಿ ದೇಶೀಯ ವಿಮಾನಗಳು,ಅಂತರ್‌ ರಾಷ್ಟ್ರೀಯ ಮತ್ತು ಸಾಮಾನ್ಯ ವಿಮಾನಯಾನಗಳ ಹಾರಾಟವು ಸೇರಿವೆ.

2021-22ರಲ್ಲಿ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು 7,792 ದೇಶೀಯ, 2122 ಅಂತರ ರಾಷ್ಟ್ರೀಯ ಮತ್ತು ಉಳಿದ ಚಾರ್ಟರ್ಡ್ ಫ್ಲೈಟ್  ಸೇರಿದಂತೆ 10,212 ಎಟಿಎಂಗಳನ್ನು ನಿರ್ವಹಿಸಿದೆ. ಮಾರ್ಚ್ 2023 ರಲ್ಲಿ ಫೆಬ್ರುವರಿಗೆ ಹೋಲಿಸಿದರೆ ವಿಮಾನ ನಿಲ್ದಾಣವು ಪ್ರಯಾಣಿಕರ ದಟ್ಟಣೆಯಲ್ಲಿ ಶೇ 7 ಬೆಳವಣಿಗೆ ದಾಖಲಿಸಿದೆ. ಮಾರ್ಚ್‌ನಲ್ಲಿ 1,43,788 ಮತ್ತು ಫೆಬ್ರುವರಿಯಲ್ಲಿ 1,34,583 ಪ್ರಯಾಣಿಕರನ್ನು ನಿರ್ವಹಿಸಿದೆ ಎಂದು ಪ್ರಕಟಣೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com