Breaking News

ಪ್ರಾಣಿ ವಿನಿಮಯ ಒಪ್ಪಂದ: ಪಿಲಿಕುಳಕ್ಕೆ ಅಪರೂಪದ ಪ್ರಾಣಿ, ಪಕ್ಷಿ

 

ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನ ಹಾಗೂ ಗುಜರಾತ್ ರಾಜಕೋಟ್ ಮೃಗಾಲಯ ನಡುವೆ ಆದ ಪ್ರಾಣಿ ವಿನಿಮಯ ಒಪ್ಪಂದದ ನಿಯಮದ ಪ್ರಕಾರ ಮಂಗಳೂರು ಪಿಲಿಕುಳಕ್ಕೆ ಏಷ್ಯಾಟಿಕ್ ಸಿಂಹ, ಎರಡು ತೋಳ, ಎರಡು ಸ್ವರ್ಣ ಬಣ್ಣದ ನರಿ, ಅಪರೂಪದ ಕೊಂಬು ಬಾತು 3 ಬಣ್ಣದ ಪೆಸೆಂಟ್‌ ಪಕ್ಷಿಗಳ ಆಗಮನವು ಪಿಲಿಕುಳ ಅಂದವನ್ನು ಹೆಚ್ಚಿಸಿವೆ.

  1.  

ಪಿಲಿಕುಳದಿಂದ ನಾಲ್ಕು ಕಾಡು ನಾಯಿಗಳು, ಒಂದು ಚಿರತೆ ಎರಡು ಸಿವೆಟ್‌ ಬೆಕ್ಕು, ನಾಲ್ಕು ರೆಟಿಕ್ಯೂಲೇಟೆಡ್ ಹೆಬ್ಬಾವು, ನಾಲ್ಕು ಮೋಂಟೆನ್ ಹಾವು, ವೈನ್ ಹಾವು, ಮರಳು ಹಾವುಗಳನ್ನು ರಾಜಕೋಟ್‌ ಗೆ ರವಾನೆ ಮಾಡಲಾಗಿದೆ.

ಪ್ರಾಣಿ ವಿನಿಮಯಕ್ಕೆ ನವದೆಹಲಿ ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿತ್ತು ಪಿಲಿಕುಳ ಜೈವಿಕ ಉದ್ಯಾನಕ್ಕೆ ಬಂದ ತೋಳ ಅಪಾಯದಂಚಿನಲ್ಲಿರುವ ಪಾಣಿ ಎಂದು ಗುರುತಿಸಲ್ಪಟ್ಟಿದೆ, ಈ ಹಿಂದೆ ಕಾಣ ಸಿಗುತಿದ್ದು ತೋಳಗಳು ಈಗ ಭಾರತದಲ್ಲಿ ಕಾಣುವುದು ಅಪರೂಪ. ಪಿಲಿಕುಳದಲ್ಲಿ ಅಪಾಯದಂಚಿನಲ್ಲಿರುವ ಪ್ರಾಣಿಗಳಾದ ಕಾಡು ನಾಯಿಗಳು, ಹೈನಗಳು ಸಂತಾನಾಭಿವೃದ್ಧಿಗೊಳಿಸುತ್ತಿರುವುದು ಮೃಗಾಲಯದ ಅಧಿಕಾರಿಗಳಿಗೆ ಸಂತಸ ತಂದಿದೆ .

ತೋಳಗಳಿಗೆ ರಿಲಯನ್ಸ್ ಫೌಂಡೇಷನ್ ನೀಡಿದ ದೇಣಿಗೆಯಲ್ಲಿ ವಿಶಾಲ ಆವರಣ ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ ಹೊಸದಾಗಿ ಬಂದ ಪ್ರಾಣಿಗಳು ಪರಿಸರಕ್ಕೆ ಹೊಂದಿಕೊಳಲು ಪ್ರತ್ಯೇಕವಾಗಿ ಇರಿಸಲಾಗಿದೆ. ಕೆಲ ಸಮಯದ ನಂತರ ಅವುಗಳನ್ನು ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ತಿಂಗಳಿಂದ ಈಚಿಗೆ ಬಂದ ಪ್ರಾಣಿಗಳ ಎರಡನೇ ಕಂತು ಆಗಿದೆ. ಮಹಾರಾಷ್ಟ್ರದ ನಾಗ್ಪುರ ಮೃಗಾಲಯದಿಂದ ಬಿಳಿ ಕೃಷ್ಣ ಮೃಗಗಳು, ನೀಲ್ ಗೈ ಇತ್ಯಾದಿ ಪ್ರಾಣಿಗಳು ಬಂದಿದ್ದವು. ಶೀಘ್ರದಲ್ಲಿ ಇನ್ನೂ ಕೆಲ ಪ್ರಾಣಿಗಳು ದೇಶದ ಇತರ ಮೃಗಾಲಯಗಳಿಂದ ಪ್ರಾಣಿ ವಿನಿಮಯ ಅಡಿ ಪಿಲಿಕುಳಕ್ಕೆ ಬರಲಿವೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ  ಎಚ್. ಜೆ.  ಭಂಡಾರಿ ತಿಳಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com