Breaking News

ಹೀಗಿದೆ ನಿಮ್ಮ ಮಂಗಳವಾರದ ರಾಶಿಫಲ

 

ವೃಶ್ಚಿಕ ರಾಶಿಯವರು ದೂರದ ಪ್ರಯಾಣದ ಜತೆಗೆ ಬಹುಜನರ ಒಡನಾಟದಿಂದ ಸಂತೋಷ ಇಮ್ಮಡಿಸುತ್ತೆ. ಮಕರ ರಾಶಿಯವರಿಗೆ ಸಮಯ ಸಂದರ್ಭಕ್ಕೆ ಸರಿಯಾಗಿ ವ್ಯವಹಾರ ಕುಶಲತೆ ಹಾಗೂ ಧನಾಗಮನ ನಿರೀಕ್ಷೆ. 

ವೃಶ್ಚಿಕ: ದೂರ ಪ್ರಯಾಣ. ಬಹುಜನರ ಒಡನಾಟದಿಂದ ಸಂತೋಷ. ಹೆಚ್ಚಿದ ವರಮಾನ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ಗುರುಹಿರಿಯರ ಪ್ರೀತಿ ಆಶೀರ್ವಾದ ಪ್ರಾಪ್ತಿ. ಗೃಹದಲ್ಲಿ ಸಂತಸದ ವಾತಾವರಣ.

ಧನು: ಗುರುಹಿರಿಯರ ಬಗ್ಗೆ ಗಮನಹರಿಸಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹೆಚ್ಚಿದ ಜವಾಬ್ದಾರಿ. ದೈಹಿಕ ಆರೋಗ್ಯ ಸುದೃಢವಾಗಿದ್ದರೂ ಮಾನಸಿಕ ಚಿಂತೆ ಕಾಡುವ ಸಾಧ್ಯತೆ.

ಮಕರ: ಸಮಯ ಸಂದರ್ಭಕ್ಕೆ ಸರಿಯಾಗಿ ವ್ಯವಹಾರ ಕುಶಲತೆ. ಹೆಚ್ಚಿದ ಧನಾಗಮನ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕವಾಗಿ ನೆಮ್ಮದಿ. ಬಂಧುಗಳಿಂದ ಹಾಗೂ ಮಿತ್ರರಿಂದ ಸಹಕಾರ.

ಮಿಥುನ: ವಿದ್ಯಾರ್ಜನೆಯಲ್ಲಿ ಆಸಕ್ತಿ. ಅಧ್ಯಯನ ಅಧ್ಯಾಪನದಿಂದ ಮಾನ್ಯತೆ. ಮಕ್ಕಳಿಂದ ಸಂತೋಷ. ದೂರದ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕರ್ಕ: ಸಣ್ಣ ಪ್ರಯಾಣ. ನಿರೀಕ್ಷಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ. ಪಾಲುದಾರರಿಂದ ಸಹಕಾರ. ಸಹೋದ್ಯೋಗಿಗಳ ಪ್ರೋತ್ಸಾಹ. ಉನ್ನತ ವ್ಯಾಸಂಗದಲ್ಲಿ ಪಾಲ್ಗೊಳ್ಳುವಿಕೆ. ಸಾಮಾನ್ಯ ಧನ ಲಾಭ.

  1.  

ಕನ್ಯಾ: ಹೆಚ್ಚಿದ ವರಮಾನ. ಸಂದರ್ಭೋಚಿತ ಮಾತುಗಾರಿಕೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ದೂರದ ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ಸಾಂಸಾರಿಕವಾಗಿ ನೆಮ್ಮದಿಯ ದಿನ. ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ವಿಷಯದಲ್ಲಿ ಜಾಗೃತೆ ಅಗತ್ಯ.

ತುಲಾ: ಧನಾಗಮನದ ನಿರೀಕ್ಷೆ . ವಿಳಂಬತೆಯಿಂದ ಪ್ರಾಪ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಬಂಧುಮಿತ್ರರ ಜವಾಬ್ದಾರಿ. ಗುರುಹಿರಿಯರ ಸಹಕಾರ.

ಮೇಷ: ಆರೋಗ್ಯ ಸುದೃಢ. ಉದ್ಯೋಗ ವ್ಯವಹಾರ ಗಳಲ್ಲಿ ಹೆಚ್ಚಿದ ಘನತೆ ಗೌರವ ಮಾನ್ಯತೆ. ಕೀರ್ತಿ ಸಂಪಾದನೆ. ಅಧಿಕ ಧನ ಲಾಭ. ಅಧಿಕಾರಯುತ ಕಾರ್ಯಾಚರಣೆ. ನೂತನ ವ್ಯವಹಾರ ಆರಂಭ. ದೂರ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ.

ವೃಷಭ: ಪೂರ್ವಾಪರ ತಿಳಿದು ಪರರಿಗೆ ಸಹಾಯ ಮಾಡಿ. ವಿಶ್ವಾಸಘಾತುಕ ಪರಿಸ್ಥಿತಿ ಎದುರಾಗುವ ಸಾಧ್ಯತೆ ಸಂಭವ. ವಂಚನೆ ಭೀತಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ಸಣ್ಣ ಪ್ರಯಾಣ. ಆರೋಗ್ಯ ವೃದ್ಧಿ.

ಸಿಂಹ: ಸಾಂಸಾರಿಕ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಆರ್ಥಿಕ ಧನವ್ಯಯ ಸಂಭವ. ಗುರುಹಿರಿಯರ ಮಾರ್ಗದರ್ಶನ ಅಗತ್ಯ. ಹೂಡಿಕೆಗಳಲ್ಲಿ ಎಚ್ಚರ ಅಗತ್ಯ. ಆರೋಗ್ಯದ ಬಗ್ಗೆ ಗಮನಹರಿಸಿ.

ಕುಂಭ: ಉತ್ತಮ ಧನಸಂಪತ್ತು ವೃದ್ಧಿ. ವಾಕ್‌ ಚತುರತೆಯಿಂದ ಜನಮನ್ನಣೆ. ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಫ‌ಲಿತಾಂಶ ಸಂಭವ. ದೇವತಾ ಸ್ಥಳ ಸಂದರ್ಶನ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ.

ಮೀನ: ಹಠ ಮಾಡದೇ ವಿವೇಕದಿಂದ ಕಾರ್ಯ ಪ್ರವೃತ್ತರಾಗಿ ಯಶಸ್ಸು ಗಳಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ದೇಹಾಯಾಸ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಾಗಮನ. ಮಕ್ಕಳಿಂದ ತೃಪ್ತಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸಿ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com