Breaking News

ಕೋಳಿ ಸಾಂಬಾರ ಜಗಳ ಕೊಲೆಯಲ್ಲಿ ಅಂತ್ಯ: ಅಪ್ಪನಿಂದಲೇ ಮಗನ ಮೇಲೆ ಹಲ್ಲೆ

 

ಸುಳ್ಯ: ತಂದೆ ಮತ್ತು ಮಗನ ನಡುವೆ ಕೋಳಿ ಸಾರಿಗಾಗಿ ನಡೆದ ಜಗಳವು ಮಗನ ಕೊಲೆಯಲ್ಲಿ ಅಂತ್ಯಕಂಡಿದೆ. ಈ ಘಟನೆ ಗುತ್ತಿಗಾರು-ಮೊಗ್ರ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ.

‌ಮೊಗ್ರ ಏರಣಗುಡ್ಡೆ ಮಾತೃ ಮಜಲು ನಿವಾಸಿ ಶಿವರಾಮ (32) ಕೊಲೆಯಾದವರು. ಮೃತರ ತಂದೆ ಶೀನ ಕೊಲೆ ಆರೋಪಿ ಆಗಿದ್ದು, ಅವರನ್ನು ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ. ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಶಿವರಾಮ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.

  1.  

ಮಂಗಳವಾರ ರಾತ್ರಿ ಮನೆಯಲ್ಲಿ ಕೋಳಿ ಸಾರು ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಶಿವರಾಮ ಮನೆಗೆ ಬರುವಾಗ ತಡವಾಗಿದ್ದು, ಈ ವೇಳೆ ಕೋಳಿ ಸಾರು ಕಾಲಿ ಆಗಿತ್ತು ಎಂದು ತಿಳಿದು ಬಂದಿದೆ. ಕೋಳಿ ಸಾರು ಇರದೇ ಇರುವದುರಿಂದ ರಾತ್ರಿ 12 ಗಂಟೆಗೆ ತಂದೆ ಶೀನ ಮತ್ತು ಶಿವರಾಮರ ನಡುವೆ ವಾಗ್ವಾದ ನಡೆದಿದೆ.  ಕೋಪಗೊಂಡ ಶೀನ ಶಿವರಾಮ ತಲೆಗೆ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಶಿವರಾಮ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಶೀನ ಅವರನ್ನು ಬಂಧನ ಮಾಡಿದ್ದಾರೆ. ಶಿವರಾಮ  ಮೃತದೇಹವನ್ನು ಕಡಬ ಆಸ್ಪತ್ರೆಗೆ ಸಾಗಿಸಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com