Breaking News

ಐಪಿಎಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭಾರಂಭ

 

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್  ನಿರೀಕ್ಷಿತ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು  ಮುಂಬೈ ಇಂಡಿಯನ್ಸ್  ಎದುರು 8 ವಿಕೆಟ್ ಗಳ  ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 172 ರನ್ ಗುರಿ ನೀಡಿತ್ತು. ಬ್ಯಾಟಿಂಗ್ ಗೆ ಇಳಿದ  ಆರ್ ಸಿಬಿ ನಾಯಕ ಪಾಪ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಜೊತೆಯಾಟವು ತಂಡಕ್ಕೆ ಉತ್ತಮ ರನ್ ತಂದು ಕೊಟ್ಟಿತು. ಪ್ಲೆಸಿಸ್ 43 ಎಸೆತಗಳಲ್ಲಿ 73 ರನ್ ಗಳಿಸಿ ಔಟಾದರು. ಈ ಐಪಿಎಲ್ ಋತುವಿನ ಮೊದಲ 100 ರನ್ ಪಾಲುದಾರಿಕೆಯನ್ನು ಕೊಹ್ಲಿ ಮತ್ತು ಪ್ಲೆಸಿಸ್ ಆಟವಾಡಿದರು. ದಿನೇಶ್ ಕಾರ್ತಿಕ್ ಶೂನ್ಯಕ್ಕೆ ನಿರ್ಗಮಿಸಿದರು.

  1.  

ಭರ್ಜರಿ ಆಟವಾಡಿ ಕಿಕ್ಕಿರಿದು ಸೇರಿದ ಅಭಿಮಾನಿಗಳಿಗೆ ಭರ್ಜರಿ ಭಾನುವಾರದ ಮಜಾ ನೀಡಿದ ವಿರಾಟ್ ಕೊಹ್ಲಿ ಔಟಾಗದೆ 82 ರನ್ ಗಳಿಸಿದರು. 49 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಗಳನ್ನ ಸಿಡಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 12 ರನ್ ಗಳಿಸಿದರು. 16.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಗುರಿ ಮುಟ್ಟಿ ಗೆಲುವು ದಾಖಲಿಸಿತು.

  1.  

Leave a Reply

Your email address will not be published. Required fields are marked *