Breaking News

ಮಾಜಿ ಸಿಎಂ ಎಚ್ಡಿಕೆಗೆ ಅಭಿಮಾನಿ ಮಹಿಳೆಯಿಂದ ಮುತ್ತಿನ ಅಭಿಮಾನ

 

ಬೆಂಗಳೂರು: ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಶನಿವಾರ ನಡೆದ ಪಂಚರತ್ನ ರಥಯಾತ್ರೆ ವೇಳೆ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಮುತ್ತು ಕೊಟ್ಟ ಪ್ರಸಂಗ ನಡೆದಿದೆ.

ಮಹಿಳಾ ಅಭಿಮಾನಿ ವಾಹನದ ಮೇಲೆ ಬಂದು ನೆಚ್ಚಿನ ನಾಯಕರನ್ನು ಮಾತನಾಡಿಸಿದ್ದು, ಮರಳುವ ಸಮಯದಲ್ಲಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿದ್ದು, ಹಲವರು ಟ್ರೋಲ್ ಕೂಡ ಮಾಡಿದ್ದಾರೆ.

ಕೈಕುಲುಕಿದ ಮಹಿಳೆ ಏಕಾಏಕಿ ಮುತ್ತು ನೀಡಿದ ಕಾರಣ ಎಚ್.ಡಿ.ಕೆ ಕ್ಷಣ ಕಾಲ ಶಾಕ್ ಗೆ ಒಳಗಾದರು. ನಂತರ ಜನರತ್ತ ಕೈಬೀಸುತ್ತಾ ಯಾತ್ರೆಯಲ್ಲಿ ಮುನ್ನೆಡದರು.

ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಭದ್ರಾವತಿ ಮೂಲದ ಮಹಿಳೆ, ಕುಮಾರಸ್ವಾಮಿ ಅವರನ್ನು ಟಿವಿಯಲ್ಲಿ ನೋಡಿದ್ದೆ. ಹೋದ ಕೂಡಲೇ ಬಂದು ತಂಗಿ ಎಂದು ಮಾತನಾಡಿಸಿದರು. ಚೆನ್ನಾಗಿದ್ದೀರಾ ಎಂದು ಕೇಳಿದಾಗ ಚೆನ್ನಾಗಿದ್ದೀನಿ ಅಂದರು ಎಂದು ಪ್ರತಿಕ್ರಿಯಿಸಿದ್ದಾರೆ.

  1.  

 

 

 

 

 

  1.  

Leave a Reply

Your email address will not be published. Required fields are marked *