Breaking News

ಹೀಗಿದೆ ನಿಮ್ಮ ಶುಕ್ರವಾರದ ರಾಶಿಫಲ

 

ವೃಶ್ಚಿಕ: ಇಂದು ನೀವು ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಬೇರೆಯವರ ಮಾತಿಗೆ ಮರುಳಗಾಬೇಡಿ. ಯಾರದ್ದೋ ಮಾತನ್ನು ನಂಬಿ ಹಣ ಕಳೆದುಕೊಳ್ಳಲಿದ್ದೀರಿ. ಸ್ನೇಹಿತರೊಂದಿಗೆ ಇಂದು ಮನಸ್ತಾಪ ಉಂಟಾಗುವ ಸಾಧ್ಯತೆಯಿದೆ.

ವೃಷಭ : ಕೌಟುಂಬಿಕ ಹಾಗೂ ಕಚೇರಿ ಎರಡು ಕಡೆಗಳಲ್ಲಿ ವಾತಾವರಣ ಶಾಂತಿಯುತವಾಗಿ ಇರಲಿದೆ. ಉದ್ಯಮದಲ್ಲಿ ಯಶಸ್ಸು ಇರಲಿದೆ. ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಗುರಿ ತಲುಪಲಿದ್ದಾರೆ. ಆದಾಯ ಚೆನ್ನಾಗಿದ್ದರೂ ಖರ್ಚು ಹೆಚ್ಚಾಗಿರಲಿದೆ.

ಮಿಥುನ : ವ್ಯಾಪಾರಸ್ಥರಿಗೆ ಇಂದು ವಾತಾವರಣ ಚೆನ್ನಾಗಿ ಇರಲಿದೆ. ಹೊಸ ಉದ್ಯಮಗಳಿಗೆ ಇನ್ಚೆಸ್ಟ್​ ಮಾಡೋಕೆ ಈ ದಿನ ಶುಭ ದಿನವಾಗಿದೆ. ಮೇಲಾಧಿಕಾರಿಗಳಿಂದ ಇಂದು ನಿಮಗೆ ಉತ್ತಮ ಪ್ರಶಂಸೆ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ.

ಕಟಕ: ದೂರ ಸಂಬಂಧಿಗಳಿಂದ ಇಂದು ನಿಮಗೆ ದಿಢೀರ್​ ಕರೆ ಬಂದಿದೆ. ರಸ್ತೆ ವಿಚಾರಕ್ಕೆ ಸಂಬಂಧಿಸದಂತೆ ನೆರೆಹೊರೆಯರೊಂದಿಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ರಾಜಕೀಯ ರಂಗದಲ್ಲಿ ಇರುವವರಿಗೆ ಈ ದಿನ ಶುಭದಿನವಾಗಿದೆ.

ಸಿಂಹ : ಸಂತಾನ ಭಾಗ್ಯ ಕಾದಿದೆ. ಐಟಿ ಕ್ಷೇತ್ರದಲ್ಲಿ ಇರುವವರಿಗೆ ಆರ್ಥಿಕ ಲಾಭ ಇರಲಿದೆ. ವಿದ್ಯಾರ್ಥಿಗಳು ಕೊಂಚ ಕಷ್ಟಪಡಬೇಕಾಗಿ ಬರಲಿದೆ. ಕುಟುಂಬದ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ.

ಧನು : ಇಂದು ನಿಮ್ಮ ಅದೃಷ್ಟ ಹೆಚ್ಚಲಿದೆ. ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಂದು ಶುಭಸುದ್ದಿ ಕಾದಿದೆ. ಹಳೆಯ ಹೂಡಿಕೆ ಯೋಜನೆಗಳು ಇಂದು ನಿಮಗೆ ಲಾಭ ನೀಡಲಿದೆ. ಆರ್ಥಿಕ ಸಮಸ್ಯೆಗಳು ಒಂದೊಂದಾಗಿಯೇ ಪರಿಹಾರವಾಗಲಿದೆ.

  1.  

ಮಕರ : ಕುಟುಂಬ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ನೆರವಾಗಲಿದ್ದಾರೆ. ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ. ನಿಮ್ಮ ಏಳ್ಗೆ ನೋಡಲು ಸಾಧ್ಯವಾಗದೇ ಕೆಲವರು ಕತ್ತಿ ಮಸೆಯಲಿದ್ದಾರೆ . ಇದರಿಂದ ನೀವು ಎಚ್ಚರಿಕೆಯಿಂದ ಇರಬೇಕು.

ತುಲಾ : ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಿಮಗೆ ಇಂದು ಆರ್ಥಿಕ ಲಾಭ ಕಾದಿದೆ. ದೇವರ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಎಲ್ಲರ ಮಾತನ್ನು ನಂಬಲು ಹೋಗಬೇಡಿ.ಇದರಿಂದ ಮುಂದೆ ನಿಮಗೆ ನಷ್ಟ ಕಾದಿದೆ. ಅನಗತ್ಯ ಯಾರೊಂದಿಗೂ ಸಂಪರ್ಕ ಬೇಡ.

ಕುಂಭ : ಸ್ನೇಹಿತರ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಲಿದ್ದೀರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿದೆ. ಹಣದ ಸಮಸ್ಯೆ ಉಂಟಾಗಲಿದೆ. ಕೆಲಸದ ಹೊರೆ ಹೆಚ್ಚಾಗಲಿದೆ. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಇಲ್ಲವಾದಲ್ಲಿ ಅನಾರೋಗ್ಯ ಉಂಟಾದೀತು.

ಮೀನ : ಕೌಟುಂಬಿಕ ಸಮಸ್ಯೆಗಳು ಅನಿರೀಕ್ಷಿತವಾಗಿ ಕೋರ್ಟ್​ ಮೆಟ್ಟಿಲೇರುವ ಸಾಧ್ಯತೆಯಿದೆ. ಹೀಗಾಗಿ ಆದಷ್ಟು ಜಾಗ್ರತೆ ವಹಿಸಿ. ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ . ಮಕ್ಕಳು ಪ್ರಗತಿ ಸಾಧಿಸಲಿದ್ದಾರೆ.ಸಣ್ಣ ಕಾಯಿಲೆಯೊಂದು ಬರುವ ಸಾಧ್ಯತೆಯಿದೆ.

ಮೇಷ : ವೃತ್ತಿ ಜೀವನದತ್ತ ಹೆಚ್ಚಿನ ಗಮನ ನೀಡಿ. ಸೋಂಬೇರಿತನ ಒಳ್ಳೆಯದಲ್ಲ. ಇತರರ ದೌರ್ಬಲ್ಯದ ಬಗ್ಗೆ ಎಂದಿಗೂ ಆಡಿಕೊಳ್ಳಬೇಡಿ. ಆರ್ಥಿಕವಾಗಿ ಈ ದಿನ ನಿಮಗೆ ಶುಭದಿನವಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಕಾದಿದೆ.

ಕನ್ಯಾ : ಆದಾಯ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ಇರಲಿದೆ. ಹೊಸ ಉದ್ಯೋಗದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಸಂಗಾತಿಯ ಜೊತೆ ಮನಸ್ತಾಪ ಮೂಡಲಿದೆ. ಇದರಿಂದ ಮನಸ್ಸಿಗೆ ಘಾಸಿ ಎನಿಸಲಿದೆ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರೊಂದಿಗೆ ಮನಸ್ತಾಪ ಇರಲಿದೆ.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com