Breaking News

ಮಂಗಳೂರು 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್ ನಿಂದ ಬೇಸಿಗೆ ಕ್ರಿಕೆಟ್ ತರಬೇತಿ

 

ಮಂಗಳೂರು:  ಇಲ್ಲಿನ 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್ ವತಿಯಿಂದ ಮಂಗಳೂರಿನಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರಿಕೆಟ್ ತರಬೇತಿ ನೀಡಲು ಸಜ್ಜಾಗಿದೆ. ಪರಿಣತ ಮತ್ತು ಅನುಭವಿ ತರಬೇತುದಾರರಿಂದ ಬೇಸಿಗೆ ಕ್ರಿಕೆಟ್ ತರಬೇತಿ ನೀಡುವುದಕ್ಕೆ ಮುಂದಾಗಿದ್ದು ಆಸಕ್ತರು ಬಾಲಕ ಹಾಗೂ ಬಾಲಕಿಯರು ತರಬೇತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕ್ರಿಕೆಟ್ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಒದಗಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಸಂಸ್ಥೆಯ ವತಿಯಿಂದ ಆಯೋಜನೆ ಮಾಡಲಾಗಿದೆ. ಬೇಸಿಗೆ ಕ್ರಿಕೆಟ್ ಶಿಬಿರವು ಏಪ್ರಿಲ್ 1 ರಿಂದ ಮೇ 31ರವರಿಗೆ ನಡೆಯಲಿದೆ. ತರಬೇತಿ ನೀಡುವುದಕ್ಕಾಗಿ ಕರ್ನಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ತರಬೇತಿ ನೀಡಿ ಅನುಭವ ಹೊಂದಿರುವ ತರಬೇತುದಾರರಾದ ಸ್ಯಾಮ್ಯುಯೆಲ್ ಜಯರಾಜ್ ಮತ್ತು ದೇವದಾಸ್ ನಾಯಕ್ ಅವರು  22 ಯಾರ್ಡ್ಸ್ ಸಂಸ್ಥೆಯಲ್ಲಿ ವೃತ್ತಿಪರ ಕ್ರಿಕೆಟ್ ಕೌಲಶ ಕಲಿಸಿಕೊಡಲಿದ್ದಾರೆ ಎಂದು ತಿಳಿಸಿದೆ.

  1.  

ಸಂಸ್ಥೆಯ ತರಬೇತುದಾರರು ಕರ್ನಾಟಕ ರಾಜ್ಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡುತ್ತಿರುವ ಆಟಗಾರರಿಗೆ ತರಬೇತಿ ನೀಡಿದ್ದು, ಪ್ರಸ್ತುತ ಕರ್ನಾಟಕ ರಣಜಿ ಟ್ರೋಫಿ ತಂಡ ಮತ್ತು ಭಾರತ ತಂಡ ಪ್ರತಿನಿಧಿಸುತ್ತಿದ್ದಾರೆ.

ಈ ವರ್ಷವೂ 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್ ಬೇಸಿಗೆ ವಿಶೇಷತೆಯ ಜತೆಗೆ ಮಂಗಳೂರು ನಗರ ಮತ್ತು ಸುತ್ತಲಿನ ಕ್ರಿಕೆಟ್ ಉತ್ಸಾಹಿ ಮಕ್ಕಳಿಗೆ ತರಬೇತಿ ನೀಡಲು ಸಜ್ಜಾಗಿದೆ.

ಆಸಕ್ತರು,  22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್-ಔಟ್ಡೋರ್ಸ್, ಮಿಲಾಗ್ರಿಸ್ ಗ್ರೌಂಡ್, ಮೋತಿಮಹಲ್ ಎದುರುಗಡೆ, ಹಂಪನಕಟ್ಟೆ, ಮಂಗಳೂರು, ಹಾಗೂ 22 ಯಾರ್ಡ್ಸ್ ಸ್ಕೂಲ್ ಆಫ್ ಕ್ರಿಕೆಟ್-ಇಂಡೋರ್ಸ್, ಸಾಯಿಬೀನ್ ಕಾಂಪ್ಲೆಕ್ಸ್, 4ನೇ ಮಹಡಿ, ಲಾಲ್ ಬಾಗ್, ಮಂಗಳೂರು ಇಲ್ಲಿ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ +91 8660572300 ಸಂಪರ್ಕ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com