Breaking News

ಎಬಿಪಿ ಸಿ ವೋಟರ್ ಸಮೀಕ್ಷೆ: ರಾಜ್ಯದಲ್ಲಿ ಕಾಂಗ್ರೆಸ್ ನಾಗಾಲೋಟ

 

ಬೆಂಗಳೂರು:  ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಈ ಸಮಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೇ ವೇಳೆ, ಹಲವು ಚುನಾವಣಾ ಏಜೆನ್ಸಿಗಳು ಪೂರ್ವ ಸಮೀಕ್ಷೆ ಪ್ರಕಟಿಸಿವೆ. ಎಬಿಪಿ ಸಿ ವೋಟರ್ ಸಮೀಕ್ಷೆಯ ವರದಿಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಅಚ್ಚರಿಯ ಸಮೀಕ್ಷಾ ವರದಿ ಬಂದಿದೆ. ಬಿಜೆಪಿ 68 ರಿಂದ 80 ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಎಬಿಪಿ ಸಿ ವೋಟರ್ ಕರ್ನಾಟಕ ಚುನಾವಣೆ ಸಮೀಕ್ಷಾ ವರದಿ ಹೀಗಿದೆ. ಕಾಂಗ್ರೆಸ್: 115 ರಿಂದ 127 ಸ್ಥಾನ, ಬಿಜೆಪಿ: 68 ರಿಂದ 80 ಸ್ಥಾನ, ಜೆಡಿಎಸ್: 23 ರಿಂದ 30 ಸ್ಥಾನ, ಇತರರು: 0 – 2 ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿಸಿದೆ.

  1.  

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಜತೆಗೆ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಎಬಿಪಿ ಸಿ ವೋಟರ್ ಸಮೀಕ್ಷಾ ವರದಿಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್: 24 ರಿಂದ 28, ಬಿಜೆಪಿ: 1 ರಿಂದ 5, ಜೆಡಿಎಸ್: 26 ರಿಂದ 27, ಇತರರು: 0- 1 ಸ್ಥಾನ ಪಡೆಯಲಿದ್ದಾರೆ ಎಂದು ತಿಳಿಸಿದೆ.

ಎಬಿಪಿ ಸಿವೋಟರ್ ಸಮೀಕ್ಷಾ ವರದಿಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಕುಸ್ತಿ ಏರ್ಪಡಲಿದೆ. ಕಾಂಗ್ರೆಸ್ ಮುನ್ನಡೆ ಪಡೆಯಲಿದೆ ಎಂದು ಸಿವೋಟರ್ ಸಮೀಕ್ಷೆಯಲ್ಲಿ ಹೇಳಿದೆ. ಬೆಂಗಳೂರು ನಗರದಲ್ಲಿ ಕಾಂಗ್ರೆಸ್: 15 ರಿಂದ 19 ಸ್ಥಾನ, ಬಿಜೆಪಿ: 11 ರಿಂದ 15 ಸ್ಥಾನ, ಜೆಡಿಎಸ್: 1 ರಿಂದ 3, ಇತರರು: 0-1, ಒಟ್ಟು: 31 ಸ್ಥಾನ

ಕರಾವಳಿ ಕರ್ನಾಟಕದಲ್ಲಿ ಸಮೀಕ್ಷಾ ವರದಿ ; ಕಾಂಗ್ರೆಸ್: 8 ರಿಂದ 12 ಸ್ಥಾನ, ಬಿಜೆಪಿ: 9 ರಿಂದ 13 ಸ್ಥಾನ, ಜೆಡಿಎಸ್: 0-1, ಇತರರು: 0 -1, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, 13ಕ್ಕೆ ಮತ ಎಣಿಕೆ ನಡೆಯಲಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com