Breaking News

ಬಹುಮಹಡಿ ಕಟ್ಟಡದಿಂದ ಆಯತಪ್ಪಿ ಬಿದ್ದು ಯುವಕ ಸಾವು

 

ಮಂಗಳೂರು: ಹೊಸತಾಗಿ ಎಸಿ ಫಿಟ್ ಮಾಡುತ್ತಿದ್ದ ವೇಳೆ ಬಹುಮಹಡಿ ಕಟ್ಟಡದ 9 ನೇ ಮಹಡಿಯಿಂದ ಆಯತಪ್ಪಿ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ನಂತೂರಿನಲ್ಲಿ ನಡೆದಿದೆ.

  1.  

ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವ್ರೋ (23) ಮೃತ ಯುವಕ. ನಂತೂರಿನ ಹಮಾರಾ ರೆಫ್ರಿಜರೇಟರ್ ಕಂಪನಿಯಲ್ಲಿ ಕೆಲಸಕ್ಕಿದ್ದ ವಿನಯ್, ನಂತೂರಿನ ಮೌಂಟ್ ಟಿಯಾರಾ ಅಪಾರ್ಟ್ ಮೆಂಟ್ ನಲ್ಲಿ ಎಸಿ ಮಷಿನ್ ಫಿಟ್ ಮಾಡಲು ತೆರಳಿದ್ದ. ಒಂಬತ್ತನೇ ಮಹಡಿಯ ಮನೆಯ ಆವರಣ ಗೋಡೆ ಹೊರಭಾಗದಲ್ಲಿ ವಿನಯ್ ಮತ್ತು ಇನ್ನೊಬ್ಬ ಯುವಕ ಮಷಿನ್ ಫಿಟ್ ಮಾಡುತ್ತಿದ್ದರು. ಈ ವೇಳೆ, ವಿನಯ್ ಆಯತಪ್ಪಿ ಮಹಡಿಯಿಂದ ಹೊರಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಯುವಕನ ತಲೆ ಒಡೆದು ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

ಬುಧವಾರ ಸಂಜೆ 6 ಗಂಟೆಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿದ್ದು ಮೃತನ ಶವವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿನಯ್ ಇತ್ತೀಚೆಗಷ್ಟೆ ಎಸಿ ಕಂಪನಿಗೆ ಕೆಲಸಕ್ಕೆ ಸೇರಿದ್ದ ಎನ್ನಲಾಗುತ್ತಿದ್ದು ದುರಂತದಿಂದಾಗಿ ಸಿಬ್ಬಂದಿ ಮತ್ತು ಆತನ ಮನೆಯವರು ಆಘಾತಕ್ಕೆ ಒಳಗಾಗಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com