Breaking News

ಮಂದಾರ್ತಿ ನೂತನ ಬೆಳ್ಳಿರಥ ಲೋಕಾರ್ಪಣೆ ಮಾಡಿದ ಪೇಜಾವರ ಸ್ವಾಮೀಜಿ

 

 ಉಡುಪಿ(ಬ್ರಹ್ಮಾವರ): ಎಲ್ಲರ ಸಂಘಟಿತ ಪ್ರಯತ್ನಕ್ಕೆ ದೇವರ ಅನುಗ್ರಹ ಇದ್ದಾಗ ಮಾತ್ರವೇ ಕಾರ್ಯ ಸಾಫಲ್ಯತೆ ಸಾಧ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಂಗಳವಾರ ದಾನಿ ಹೆಗ್ಗುಂಜೆ ಬಡಾಮನೆ ವಿಶ್ವನಾಥ ಹೆಗ್ಡೆ, ಹೆಗ್ಗುಂಜೆ ಚಾವಡಿಮನೆ ರುದ್ರಮ್ಮ ಹೆಗ್ಗಡ್ತಿ, ಅಮರನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಸೇವಾರೂಪದಲ್ಲಿ ನೀಡಿದ ನೂತನ ರಜತ ಬೆಳ್ಳಿ ರಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

  1.  

ನಾವು ನೀಡಿದ್ದು, ಮಾಡಿದ್ದು ಎನ್ನುವುದಕ್ಕಿಂತ ದೇವರೇ ಮಾಡಿಸಿದ್ದು ಅರ್ಥಪೂರ್ಣ. ದುಡಿಮೆಯ ಸ್ವಲ್ಪ ಅಂಶವನ್ನು ಧಾರ್ಮಿಕ ಚಟುವಟಿಕೆ, ಸೇವಾ ಕಾರ್ಯಕ್ಕೆ ವಿನಿಯೋಗಿಸಿದಾಗ ಜೀವನ ಸಾರ್ಥಕ ಎಂದರು.

‌ಬೆಂಗಳೂರು ವಿ.ವಿ. ವಿತ್ತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರವಿ ಎಸ್. ಸಿ. ಕೊಟಾರಗಸ್ತಿ, ಹೆಗ್ಗುಂಜೆ ಚಾವಡಿಮನೆ ವಿಜಯನಾಥ ಹೆಗ್ಡೆ, ಅಮರನಾಥ ಶೆಟ್ಟಿ, ಅನುವಂಶಿಕ ಮೊಕ್ತೇಸರ ಎಚ್.ಸುರೇಂದ್ರ ಶೆಟ್ಟಿ, ಎಚ್.ಪ್ರಭಾಕರ ಶೆಟ್ಟಿ, ಎಚ್.ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಅರ್ಚಕ ವೃಂದ, ಸಿಬ್ಬಂದಿ ಭಕ್ತರು ಇದ್ದರು.

ಈ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು. ರಥಶಿಲ್ಪಿ ರಾಜಗೋಪಾಲ ಆಚಾರ್ಯ, ರಥ ಕೊಠಡಿ ನಿರ್ಮಾಣ ಮಾಡಿದ ಕಳಿ ಚಂದ್ರಯ್ಯ ಆಚಾರ್ಯ ಮತ್ತಿತರರನ್ನು ಗೌರವಿಸಲಾಯಿತು. ಎಚ್.ಉದಯ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಎನ್.ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com