Breaking News

ವಿದ್ಯಾರ್ಥಿಗಳಿಗೆ ಜೀವನ ಕೌಶಲ ತರಬೇತಿ: ಪಿ.ಕೆ.ಥೋಮಸ್ ಮನವಿ

 

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿರುವ ಅಂಗನವಾಡಿಯಿಂದ  7 ನೇ ತರಗತಿ ವರೆಗಿನ ಮಕ್ಕಳಿಗೆ ಮಕ್ಕಳಿಗೆ ಜೀವನ ಕೌಶಲ ನಿಯಮಗಳ ಬಗ್ಗೆ ವಾರದಲ್ಲಿ 2 ತರಗತಿಗಳನ್ನು ತರಬೇತಿ ನಡೆಸುವ ಬಗ್ಗೆ ಶಿಕ್ಷಣ ಶಿಲಾಖೆಯಿಂದ ಸಂಪೂರ್ಣ ಸಹಕಾರ ನೀಡುವಂತೆ ಕೋರಿ ಮೂಡುಬಿದಿರೆ ಪುರಸಭೆ  ಮತ್ತು ರೋಟರಿ ಕ್ಲಬ್ ವತಿಯಿಂದ ಶಿಕ್ಷಣಾಧಿಕಾರಿ ಗಣೇಶ್ ವೈ ಅವರಿಗೆ ಮನವಿ ನೀಡಲಾಯಿತು.

ಪುರಸಭಾ ಸದಸ್ಯ ಪಿ.ಕೆ.ಥೋಮಸ್  ಪತ್ರಕರ್ತರ ಜತೆಗೆ ಅವರು ಮಾತನಾಡಿ ರೋಟರಿ ಕ್ಲಬ್ ಮತ್ತು ಮೂಡುಬಿದಿರೆ ಪುರಸಭೆ  ಮಕ್ಕಳಿಗೆ ಜೀವನ ಕೌಶಲ ಕಲಿಸುವಂತಹ ಕಾರ್ಯ ಆರಂಭಿಸಿದ್ದು, ಈ ಕಾರ್ಯಕ್ರಮಕ್ಕೆ ಬಹಳಷ್ಟು ಶ್ರಮ‌ ವಹಿಸಬೇಕಾಗಿದೆ. ಎಲ್ಲರ ಸಹಕಾರ ಬೇಕಿದೆ. ಮುಂದಿನ ದಿನಗಳಲ್ಲಿ ರೋಟರಿ ಕ್ಲಬ್ ಸೇರಿದಂತೆ ಬೇರೆ ಬೇರೆ ಸಂಘ-ಸಂಸ್ಥೆಗಳನ್ನು ಜೊತೆಯಾಗಿಸಿಕೊಂಡು ಮೂಡುಬಿದಿರೆ ವ್ಯಾಪ್ತಿಯಲ್ಲಿರುವ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಮೈನ್ ಶಾಲೆ, ಪ್ರಾಂತ್ಯ, ಸಂತ್ ಥೋಮಸ್, ಡಿ.ಜೆ, ಅಳಿಯೂರು ಸೇರಿದಂತೆ ಇನ್ನಿತರ ಶಾಲೆಗಳ ಮಕ್ಕಳ ಜೀವನಕ್ಕೆ ಬೇಕಾಗಿರುವ ಕೌಶಲ್ಯಗಳನ್ನು ಕಲಿಸಿ ಮುಂದಿನ‌ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಜೀವನ ಕೌಶಲವನ್ನು ಕಲಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.

  1.  

ಹಿರಿಯರನ್ನು ಗೌರವಿಸುವ ಗುಣ, ಸ್ವನೈರ್ಮಲ್ಯ ಹಾಗೂ ಸ್ವಚ್ಛ ಪರಿಸರ, ಸಾರಿಗೆ ನಿಯಮಗಳ ಪಾಲನೆ, ಉಳಿತಾಯ ಮಾಡುವ ಗುಣ, ಒಳ್ಳೆಯ ನಡವಳಿಕೆ, ಸಮಯದ ಮೌಲ್ಯ, ಆರೋಗ್ಯವೇ ಭಾಗ್ಯ, ಪ್ರಕೃತಿ ಪ್ರೇಮ, ಆಟೋಟಗಳಲ್ಲಿ ಭಾಗವಹಿಸುವಿಕೆ, ಪರೋಪಕಾರ ಮತ್ತು ಹಂಚಿಕೆ ಮನೋಭಾವ ಮತ್ತು ನಮ್ಮ ಸಂಸ್ಕೃತಿಯ  ತರಬೇತಿಯನ್ನು ನೀಡಲಾಗುತ್ತದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರೀಫ್, ಕಾರ್ಯದರ್ಶಿ ನಾಗರಾಜ ಪಿ., ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ.ಎಂ, ರೋಟರಿ ಚಾರಿಟೇಬಲ್ ಟ್ರಸ್ಟ್ ನ ಮಾಜಿ ಅಧ್ಯಕ್ಷ ಡಾ.ಮುರಳಿಕೃಷ್ಣ, ರೋಟರಿ ಕ್ಲಬ್ ನ ಸದಸ್ಯ ಜಯರಾಮ್ ಕೋಟ್ಯಾನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಇದ್ದರು.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com