Breaking News

ಭಾರತದ ಬೌಲರ್ ದಾಳಿಗೆ ಆಸೀಸ್ ಪಡೆ ತತ್ತರ

 

ಮುಂಬೈ:  ಮುಹಮ್ಮದ್ ಸಿರಾಜ್ ಹಾಗೂ  ಶಮಿ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಭಾರತ ವಿರುದ್ಧದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 35.4 ಓವರ್‌ಗಳಲ್ಲಿ ಕೇವಲ 188 ರನ್‌ಗೆ ಆಲೌಟಾಗಿದೆ.

  1.  

ವಾಂಖೆಡೆ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯದ ಪರ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ 81 ರನ್, 65 ಎಸೆತ, 10 ಬೌಂಡರಿ, 5  ಬೌಂಡರಿಗಳನ್ನು ದಾಖಲಿಸಿದರು. ಜೋಶ್ ಇಂಗ್ಲಿಸ್ 26 , ಸ್ಟೀವನ್ ಸ್ಮಿತ್ 22  ರನ್ ಕಲೆ ಹಾಕಿದರು.

ಭಾರತದ ಬೌಲಿಂಗ್‌ನಲ್ಲಿ ಶಮಿ   ಹಾಗೂ ಮುಹಮ್ಮದ್ ಸಿರಾಜ್  ತಲಾ 3 ವಿಕೆಟ್‌ಗಳನ್ನು ಪಡೆದರೆ, ರವೀಂದ್ರ ಜಡೇಜಾ 2, ಹಾರ್ದಿಕ್ ಪಾಂಡ್ಯ1 ಹಾಗೂ ಕುಲದೀಪ್ ಯಾದವ್1ಉಳಿದ ವಿಕೆಟ್‌ಗಳನ್ನು ಕಬಳಿಸಿದರು.

  1.  

Leave a Reply

Your email address will not be published. Required fields are marked *