Breaking News

ಮೊಬೈಲ್ ಕಳವು, ಕಳೆದುಕೊಂಡರೆ ಪತ್ತೆ ಕಾರ್ಯ ಈಗ ಸುಲಭ: ಕುಲದೀ‍ಪ್ ಜೈನ್

 

ಮಂಗಳೂರು: ಕೇಂದ್ರ ಸರಕಾರ ಈಚೆಗೆ ಆರಂಭಿಸಿದ್ದ ವೆಬ್ ಪೋರ್ಟಲ್ ಸಹಾಯದಿಂದ ಮಂಗಳೂರು ಪೊಲೀಸರು ಕಳವು ಅಥವಾ ಕಳೆದುಕೊಂಡಿದ್ದ 39 ಮೊಬೈಲ್ ಗಳನ್ನು ಪತ್ತೆ ಮಾಡಿ ಮತ್ತೆ ವಾರಸುದಾರರಿಗೆ ವಾಪಸ್ ಮರಳಿಸಿದ್ದಾರೆ.

ಐದು ತಿಂಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 402 ಮೊಬೈಲ್ ಕಳವು ಮತ್ತು ಬಿದ್ದು ಹೋದ ಬಗ್ಗೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಈ ಬಗ್ಗೆ ಮೊಬೈಲ್ ಕುರಿತ ಐಎಂಇಐ ಮಾಹಿತಿಗಳನ್ನು ಕೇಂದ್ರ ಸರಕಾರದ ಸೆಂಟ್ರಲ್ ಎಕ್ವಿಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್ ) ಹೊಸ ಆ್ಯಪ್ ಆಧರಿತ ಪೋರ್ಟಲ್ ನಲ್ಲಿ ಮಾಹಿತಿ ದಾಖಲಿಸಲಾಗಿತ್ತು. ಈ ಪೈಕಿ 124 ಮೊಬೈಲ್ ಗಳು ಪತ್ತೆ ಆಗಿದ್ದು, ಅದರಲ್ಲಿ 39 ಮೊಬೈಲ್ ಗಳನ್ನು ಅದರ ವಾರಿಸುದಾರರಿಗೆ ನೀಡಲಾಗಿದೆ. ಈ ಮೊಬೈಲ್ ಗಳ ಬೆಲೆ ಏಳು ಲಕ್ಷ ಎಂದು ಅಂದಾಜಿಸಲಾದೆ.

ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಗುರುವಾರ 34 ಮಂದಿಯ ಮೊಬೈಲ್ ಗಳನ್ನು ಹಿಂತಿರುಗಿಸಿದ್ದಾರೆ. ಅಲ್ಲದೆ, ಈ ಆ್ಯಪ್ ಕಾರ್ಯ ನಿರ್ವಹಣೆ ಮತ್ತು ಅದಕ್ಕೆ ಸಾರ್ವಜನಿಕರೇ ನೇರವಾಗಿ ದೂರು ಸಲ್ಲಿಕೆ ಮಾಡಬಹುದು ಎನ್ನುವ ಬಗ್ಗೆಯೂ ವಿವರಣೆ ನೀಡಿದ್ದಾರೆ. ಮಂಗಳೂರಿನ ಪ್ರೀತಿಶ್ ಎಂಬವರು ಕೆಲವು ದಿನಗಳ ಹಿಂದಷ್ಟೇ ಮೊಬೈಲ್ ಕಳೆದುಕೊಂಡಿದ್ದರು. ಅದು ಮರಳಿ ಸಿಗುವ ಸಾಧ್ಯತೆ ಇಲ್ಲ ಎಂದೇ ನಂಬಿದ್ದರು. ಆದರೂ ದೂರು ಕೊಟ್ಟು ಬಿಡೋಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೂರು ನೀಡಿದ ಎರಡೇ ದಿನದಲ್ಲಿ ಮೊಬೈಲ್ ಅನ್ನು ಪೊಲೀಸರು ಪತ್ತೆ ಮಾಡಿದ್ದು ಪ್ರೀತಿಶ್ ಅವರ ಮೊಗದಲ್ಲಿ ಖುಷಿಗೆ ಕಾರಣವಾಗಿದೆ.

  1.  

ಹಿಂದೆಲ್ಲಾ ಮೊಬೈಲ್ ಕಳವು ದೂರನ್ನು ಪಡೆದು ಪೊಲೀಸರು ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸುತ್ತಿದ್ದರು. ಒಂದೆರಡು ಬಾರಿ ಟ್ರೈ ಮಾಡಿ ಸಿಗದೇ ಇದ್ದಾಗ ಬಿಟ್ಟು ಬಿಡುತ್ತಿದ್ದರು. ಈಗ ತಂತ್ರಜ್ಞಾನ ಬದಲಾಗಿದ್ದು, ಹೊಸ ಆ್ಯಪ್ ನಲ್ಲಿ ಮೊಬೈಲ್ ಕುರಿತು ಮಾಹಿತಿ ಅಪ್ಲೋಡ್ ಮಾಡಿದರೆ ಮುಗೀತು. ಆ ಮೊಬೈಲ್ ಮತ್ತೆ ಯಾವಾಗ ಓಪನ್ ಆದರೂ ಆಯಾ ಠಾಣೆಗೆ ಮಾಹಿತಿ ನೀಡುತ್ತದೆ. ಅಲ್ಲದೆ, ಲೊಕೇಶನ್ ಕೂಡ ತೋರಿಸುತ್ತದೆ. ಇದರಿಂದಾಗಿ ಪೊಲೀಸರಿಗೆ ಮೊಬೈಲ್ ಟ್ರೇಸ್ ಮಾಡುವುದು ಸುಲಭ ಎಂದು ಕಮಿಷನರ್ ಕುಲದೀಪ್ ಜೈನ್ ಹೇಳಿದರು.

ಸಾರ್ವಜನಿಕರು ಈ ವೆಬ್ ನಲ್ಲಿ ನೇರವಾಗಿ ದೂರು ನೀಡುವುದಕ್ಕೂ ಸಾಧ್ಯವಿದೆ. ದೂರಿತ್ತ ಬಳಿಕ ಅದರ ಮಾಹಿತಿಯನ್ನು ಆಯಾ ವ್ಯಾಪ್ತಿಯ ಠಾಣೆಗಳಿಗೆ ನೀಡಬೇಕು. ಇಲ್ಲವೇ ನೇರವಾಗಿ ಪೊಲೀಸ್ ಠಾಣೆಗೂ ದೂರು ನೀಡಬಹುದು. ಪೊಲೀಸರು ಮೊಬೈಲ್ ಪತ್ತೆ ಮಾಡುತ್ತಾರೆ ಎಂದರು ಕಮಿಷನರ್ ಹೇಳಿದರು.

ಗಾಯತ್ರಿ ಭಟ್ ಎಂಬವರು ಮಾತನಾಡಿ, ಒಂದೂವರೆ ತಿಂಗಳ ಹಿಂದೆ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಮೊಬೈಲ್ ಕಳಕೊಂಡಿದ್ದೆ. ಅದು ಮತ್ತೆ ಸಿಗುತ್ತೆ ಅನ್ನುವ ಭರವಸೆ ಇರಲಿಲ್ಲ. ಈಗ ಪೊಲೀಸರು ಪತ್ತೆ ಮಾಡಿದ್ದಾರೆ ಸಂತೋಷವಾಗಿದೆ ಎಂದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com