Breaking News

ಮಂಗಳೂರು ವಿವಿ 41ನೇ ಘಟಿಕೋತ್ಸವ ಉದ್ಘಾಟಿಸಿ ರಾಜ್ಯಪಾಲ ಗೆಹಲೋತ್

 

ಮಂಗಳೂರು: ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಇಂದಿನ ಯುವಕರ ಪಾತ್ರ ದೊಡ್ಡದು. ವಿಶ್ವದಲ್ಲಿಯೇ ದೇಶವು ಮನ್ನಣೆ ಸಾಧಿಸುತ್ತಿದೆ. ಆರ್ಥಿಕವಾಗಿ ನಾವು ಸದೃಢವಾಗುತ್ತಿದ್ದೇವೆ. ಆರ್ಥಿಕ ವ್ಯವಸ್ಥೆಯಲ್ಲಿ ದೇಶವು 5ನೇ ಸ್ಥಾನದಲ್ಲಿ ಮುಂಚೂಣಿಯಲ್ಲಿದೆ. ಉನ್ನತ ಶಿಕ್ಷಣವು ಸ್ಥಾನೀಯ ಭಾಷೆಯಲ್ಲಿ ಸಿಗಬೇಕು ಎಂಬ ನೀತಿಯ ಯೋಜನೆಯನ್ನು ಸರ್ಕಾರವು ರೂಪಿಸಿದೆ. ಹೊಸ ಶಿಕ್ಷಣ ನೀತಿಯನ್ನು ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಕರ್ನಾಟಕ ಸರ್ಕಾರದ್ದು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ, ಅಧ್ಯಕ್ಷೀಯ ಭಾಷಣ ಮಾಡಿದರು.

ಉನ್ನತ ಶಿಕ್ಷಣ ಪಠ್ಯಪುಸ್ತಕಗಳು ಸ್ಥಳೀಯ ಭಾಷೆಯಲ್ಲಿ ಹೆಚ್ಚು ಸಿಗುವಂತೆ ಆಗಬೇಕು ಎಂಬುದನ್ನು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಸ್ಥಳೀಯ ಭಾಷೆಯಲ್ಲಿ ಸಿಗುವಂತಹ ಶಿಕ್ಷಣವು ಹೆಚ್ಚು ಪರಿಣಾಮಕಾರಿ ಬೆಳವಣಿಗೆ ಸಹಕಾರಿ ಆಗುತ್ತದೆ ಎಂದರು.

ಹವಾಮಾನ ವೈಪರೀತ್ಯ ಸಾಕಷ್ಟು ರೀತಿಯಲ್ಲಿ ಪರಿಣಾಮ ಬೀರುತ್ತಿದ್ದು, ಉತ್ತಮ ಪರಿಸರ, ಉತ್ತಮ ಗಾಳಿ, ಶುದ್ದ ನೀರು ಭವಿಷ್ಯತ್ತಿನಲ್ಲಿ ಅತಿ ಮುಖ್ಯವಾಗಿದ್ದು, ಅದರ ಕಡೆಗೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯತೆ ಇದೆ. ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ ಕೂಡ ಎಂದು ಹೇಳಿದರು.

  1.  

ನಮ್ಮ ಯೋಚನೆ ವಸುದೈವಕ ಕುಟುಂಬದ ರೂಪದಲ್ಲಿ ಇರಬೇಕು. ಇದನ್ನು ಸಾಕಾರ ಮಾಡಲು ಎಲ್ಲರೂ ನಾವು ಒಟ್ಟಾಗಬೇಕು. ಪರಸ್ಪರ ಸಹಕಾರ, ಪ್ರೀತಿ, ವಿಶ್ವಾಸ ಇದ್ದಲ್ಲಿ ಮಾತ್ರ ವಸುದೈವ ಕುಟುಂಬ ನಿರ್ಮಾಣಕ್ಕೆ ಸಹಕಾರಿ. ಖಷಿ ಮುನಿಗಳು ಕೂಡ ಇದೇ ರೀತಿಯ ಶಿಕ್ಷಣ ನೀಡುತ್ತಿದ್ದರು  ಎಂದರು.

ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಸೇವೆ ಸಲ್ಲಿಸಿರುವ ಸಾಧಕರಿಗೆ ಮಂಗಳೂರು ವಿಶ್ವವಿದ್ಯಾಲಯವು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದೆ. ಗೌರವ ಡಾಕ್ಟರೇಟ ಪದವಿ ಪಡೆದ ಸಾಧಕರಿಂದ ಮತ್ತಷ್ಟು ಉತ್ತಮ ಕೆಲಸಗಳು ಆಗಲಿ ಎಂದರು.

ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ ನಿರ್ದೇಶಕ ಪ್ರೊ. ಎಸ್.ಸಿ. ಶರ್ಮ ಮಾತನಾಡಿ, ವಿಶ್ವವಿದ್ಯಾಲಯಗಳು ರಚನಾತ್ಮಕವಾಗಿ ಬದಲಾವಣೆ ಹೊಂದುತ್ತಿವೆ. ಬಹುಮಾಧ್ಯಮದ ರೀತಿಯಲ್ಲಿ ಕೆಲಸ ಮಾಡುವಂತಹ ಟಾಸ್ಕ ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಕಷ್ಟು ಸಿತ್ಯಂತರಗಳು ವಿಶ್ವವಿದ್ಯಾಲಯ ಶಿಕ್ಷಣ ಪದ್ದತಿಯಲ್ಲಿ ಬದಲಾಣೆ ಕಾಣುತ್ತಿದೆ ಎಂದು  ಹೇಳಿದರು.

ಪದವಿ, ಪದವೀಧರರು ತಾವು ಪಡೆದ ಪದವಿಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಕಾಲಗಳು ಶಿಕ್ಷಣದಲ್ಲಿ ಬಹಳ ಮುಖ್ಯ. ಎಂಜಿನಿಯರಿಂಗ್, ಡಾಕ್ಟರೇಟ್ ಪಡೆದವರು ಸಮಾಜುಮುಖಿಯಾಗಿ ಕೆಲಸ ಮಾಡಬೇಕು. ದೇವರು ನೀಡಿದಂತಹ ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಯೋಚನೆಗಳು ನಾವು ಪಡೆದ ಪದವಿಗಳಿಗೆ ಮೌಲ್ಯವನ್ನು ತರಬೇಕು. ಉನ್ನತ ಶಿಕ್ಷಣ ನೀಡುವಲ್ಲಿ ಮಂಗಳೂರು ವಿವಿ ಮುಂಚೂಣಿಯಲ್ಲಿದೆ ಎಂದರು.

ಎಂಎ, ಪಿಎಚ್ಡಿ, ಡಿಗ್ರಿ ಪದವೀಧರರಿಗೆ ರಾಜ್ಯಪಾಲರು ಪದವಿ ಪ್ರಮಾಣಪತ್ರ ವಿತರಣೆ ಮಾಡಿದರು.  115 ಮಂದಿಗೆ ಪಿಎಚ್‌.ಡಿ. ಪದವಿ (ಕಲೆ -29, ವಿಜ್ಞಾನ -61, ವಾಣಿಜ್ಯ -22, ಶಿಕ್ಷಣ -3), 7 ಅಂತರ‌ ತಾರಾಷ್ಟ್ರೀಯ ಪುರುಷ ವಿದ್ಯಾರ್ಥಿಗಳು ಪಿಎಚ್‌.ಡಿ.,  55 ಮಂದಿಗೆ ಚಿನ್ನದ ಪದಕ ಮತ್ತು 57 ನಗದು ಬಹುಮಾನ, ವಿವಿಧ ಕೋರ್ಸ್‌ಗಳ 199 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್‌ ಪಡೆದ 71 ಮಂದಿಗೆ ರ್‍ಯಾಂಕ್‌ ಪ್ರಮಾಣ ಪತ್ರ ನೀಡಲಾಯಿತು.

ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಸಚಿವ ಅಶ್ವಥ್ ನಾರಾಯಣ, ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ. ರಾಜು ಕೃಷ್ಣ ಚಲಣ್ಣವರ, ಕಿಶೋರ್ ಕುಮಾರ್ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com