Breaking News

ಶಿಕ್ಷಣ ಕ್ಷೇತ್ರದ ಸಾಧಕ ಪ್ರೊ. ಎಂ. ಬಿ. ಪುರಾಣಿಕ್ ಗೆ ಗೌರವ ಡಾಕ್ಟರೇಟ್

 

ಮಂಗಳೂರು: ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ ಅವರು 30 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರೊ. ಎಂ. ಬಿ. ಪುರಾಣಿಕ್ ಅವರ ಸಾರಥ್ಯದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯ, ಮೂಡುಶೆಡ್ಡೆಯ ಶುಭೋದಯ ವಿದ್ಯಾಲಯ, ತಲಪಾಡಿ ಶಾರದಾ ವಿದ್ಯಾನಿಕೇತನ ಮತ್ತು ಶಾರದಾ ಆಯುರ್ವೇದ ಮತ್ತು ನ್ಯಾಚುರೋಪತಿ ವಿದ್ಯಾಲಯಗಳನ್ನು ಮುನ್ನಡೆಸುತ್ತಿದ್ದಾರೆ. ವೈವಿಧ್ಯಮಯ ಶೈಕ್ಷಣಿಕ ಚಟುವಟಿಕೆಗಳಿಂದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾಗಿ ಬೆಳೆದು ನಿಂತಿವೆ. ಸಾವಿರಾರೂ ಸಂಖ್ಯೆ ವಿದ್ಯಾರ್ಥಿಗಳು ಇವರ ಶಿಕ್ಷಣ ಸಂಸ್ಥೆಗಳಲ್ಲಿ ಇದ್ದಾರೆ.

  1.  

ಪ್ರೊ. ಪುರಾಣಿಕ್ ಅವರು ವಿಶ್ವಿಹಿಂದೂ ಪರಿಷತ್‍ನ ಪ್ರಾಂತ ಅಧ್ಯಕ್ಷರಾಗಿ, ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ, ಗೋವನಿತಾಶ್ರಯ ಟ್ರಸ್ಟ್ ಅಧ್ಯಕ್ಷರಾಗಿ, ಹೊಸದಿಗಂತ ಪತ್ರಿಕೆ ನಿರ್ದೇಶಕರಾಗಿ, ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್ ಇದರ ವಿಶ್ವಸ್ಥರಾಗಿ ಮತ್ತು ವಿವಿಧ ದೇವಾಲಯಗಳ ಜೀರ್ಣೋದ್ಧಾರ ಸಮಿತಿಯಲ್ಲಿ ದುಡಿದ ಅನುಭವವನ್ನು ಹೊಂದಿದ್ದಾರೆ.

ಪುರಾಣಿಕ್ ಅವರ  ಶಿಕ್ಷಣ ಮತ್ತು ಸಮಾಜದ ಸೇವೆಗಾಗಿ 2010 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಸ್ವರ್ಣವಲ್ಲಿ ಮಠದಿಂದ ‘ಸೇವಾ ಸಿಂಧು ಪ್ರಶಸ್ತಿ’ಯನ್ನು ಮತ್ತು 2018ರಲ್ಲಿ ಉಡುಪಿ ಪೇಜಾವರ ಶ್ರೀಗಳಿಂದ ‘ಶ್ರೀ ಕೃಷ್ಣ ಸೇವಾಧುರೀಣ’ ಪ್ರಶಸ್ತಿ, 2022ರಲ್ಲಿಆನಂದ ಬಳಗ ಬೆಂಗಳೂರು ಇವರಿಂದ ‘ಸಮಾಜ ಭೂಷಣ ಪ್ರಶಸ್ತಿ’ ಹಾಗೂ ಬೆಸ್ಟ್ ಮ್ಯಾನೇಜ್‍ಮೆಂಟ್ ಪ್ರಶಸ್ತಿಗಳು ಬಂದಿದ್ದು, ಅವರ ಈ ಎಲ್ಲ ಸಾಧನೆಗಳಿಗೆ ಮಂಗಳೂರು ವಿವಿ ನೀಡುವ ಗೌರವ ಡಾಕ್ಟರೇಟ್ ಪದವಿ ಹೊಸ ಮೈಲುಗಲ್ಲು ಎಂದು ಹೇಳಲಾಗುತ್ತಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com