Breaking News

ಕ್ಷೇತ್ರಕ್ಕೆ 2500 ಮನೆ ಮಂಜೂರಿ ಮಾಡಿಸಿದ ಶಾಸಕಿ ರೂಪಾಲಿ ನಾಯ್ಕ್

 

ಕಾರವಾರ: ಶಾಸಕಿ ರೂಪಾಲಿ ನಾಯ್ಕ ಅವರ ಪ್ರಯತ್ನದಿಂದ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ) ಅಡಿಯಲ್ಲಿ ಒಟ್ಟೂ 2,500 ಮನೆಗಳು ಮಂಜೂರಿ ಆಗಿವೆ.

ಬಸವ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ 1647, ಅಲ್ಪಸಂಖ್ಯಾತರಿಗೆ 250 ಸೇರಿ ಒಟ್ಟೂ 1897ಮನೆಗಳು ಮಂಜೂರಾಗಿದ್ದು, ಡಾ.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ)ಯಲ್ಲಿ ಪರಿಶಿಷ್ಟ ಜಾತಿಗೆ 429, ಪರಿಶಿಷ್ಟ ಪಂಗಡಕ್ಕೆ 174 ಸೇರಿ ಒಟ್ಟೂ 603 ಮನೆಗಳು ಮಂಜೂರಾಗಿವೆ. ಈ ಎರಡೂ ಯೋಜನೆಗಳಿಂದ ಕ್ಷೇತ್ರಕ್ಕೆ 2500 ಮನೆಗಳು ಮಂಜೂರಿಯಾಗಿವೆ. ಈ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

  1.  

ಈ ಹಿಂದೆ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ 5-10 ಮನೆಗಳು ಮಂಜೂರಾಗುತ್ತಿದ್ದವು. ಆದರೆ ಈ ಬಾರಿ ಅತಿ ಹೆಚ್ಚು ಮನೆಗಳು ಮಂಜೂರಾಗಿವೆ. ಇದರಿಂದ ಮನೆ ನಿರ್ಮಾಣಕ್ಕೆ ಸಹಕಾರ ಆಗಲಿದೆ.

ಮನೆ ಮಂಜೂರಾತಿ ವಿವರ: ಅಮದಳ್ಳಿ 67, ತೊಡೂರು 47 , ಚೆಂಡಿಯಾ 90 , ಶಿರವಾಡ 112, ಕಡವಾಡ 72 , ಕಿನ್ನರ 35 , ವೈಲವಾಡ 30, ದೇವಳಮಕ್ಕಿ 55, ಕೆರವಡಿ 23, ಮಲ್ಲಾಪುರ 100 , ಕದ್ರಾ 106, ಗೋಟೆಗಾಳಿ 47, ಹಣಕೋಣ 57 , ಘಾಡಸಾಯಿ 63, ಅಸ್ನೋಟಿ 24, ಮುಡಗೇರಿ 53, ಮಾಜಾಳಿ 51, ಚಿತ್ತಾಕುಲ 133, ಸುಂಕಸಾಳ 77, ಡೋಂಗ್ರಿ 113, ಅಚವೆ 75, ಹಿಲ್ಲೂರು 65, ಮೊಗಟಾ 55, ಬೆಳಸೆ 42, ವಾಸರಕುದ್ರಗಿ 52, ಅಗಸೂರ 62, ಅಗ್ರಗೋಣ 65, ಸಗಡಗೇರಿ 61, ಶೆಟಗೇರಿ 83, ವಂದಿಗೆ 67, ಬೊಬ್ರುವಾಡ 48, ಬೆಳಂಬರ 45, ಹೊನ್ನೆಬೈಲ 56, ಹಾರವಾಡ 56, ಅವರ್ಸಾ 60, ಹಟ್ಟಿಕೇರಿ 55, ಬೆಲೇಕೇರಿ 53, ಭಾವಿಕೇರಿ 75, ಅಲಗೇರಿ 70 ಮನೆಗಳು ಸೇರಿ ಒಟ್ಟೂ 2500 ಮನೆಗಳು ಮಂಜೂರಾಗಿವೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com