Breaking News

ತ್ರಿಕೋಣಾಸನದಿಂದ ಕಾಲಿನ ಮಾಂಸಖಂಡ ಪಳಗುತ್ತಾ.. ಇಲ್ಲಿದೇ ಮಾಹಿತಿ

 

⇒ ಗೋಪಾಲಕೃಷ್ಣ ದೇಲಂಪಾಡಿ

ನಮಗೆ ಸೌಖ್ಯವನ್ನು ಯಾವುದೇ ತೊಂದರೆ ಇಲ್ಲದೆ ಅನುಭವಿಸಬೇಕಾದರೆ ಪ್ರಥಮವಾಗಿ ನಮ್ಮ ಶರೀರ, ಇಂದ್ರೀಯಗಳಲ್ಲಿ ಯಾವುದೇ ಕಾಯಿಲೆ ಇಲ್ಲದೆ ಇರಬೇಕು. ಶರೀರದ ಭಾಗಗಳಾದ ಮೆದುಳು, ಕತ್ತು, ಎದೆ, ಶ್ವಾಸಕೋಶ, ಪಿತ್ತಕೋಶ, ಮೂತ್ರಕೋಶ, ಮಲಕೋಶ, ಅನ್ನನಾಳ, ಕಂಠನಾಳ, ಮೂತ್ರನಾಳ, ಗುದನಾಳ ಇತ್ಯಾದಿ ಭಾಗಗಳು ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸುತ್ತಿರಬೇಕು.

ಈ ಆಸನವು ತ್ರಿಕೋಣಾಕಾರದಲ್ಲಿರುತ್ತದೆ. ಇದು ಕಾಲುಗಳು, ಕೈಗಳು ಮತ್ತು ದೇಹ ಮುಂಡದಿಂದ ತ್ರಿಕೋಣದ ಆಕಾರ ಪಡೆಯುವಿಕೆಯ ಆಸನ.

  1.  

ಅಭ್ಯಾಸ ಕ್ರಮ: ಮೊದಲು ತಾಡಾಸನದಲ್ಲಿ ನಿಲ್ಲಬೇಕು. ಆನಂತರ ಕಾಲುಗಳನ್ನು ಅಗಲಿಸಿ ಮೂರು ಯಾ ಮೂರುವರೆ ಅಡಿಗಳಷ್ಟು ಅಂತರದಲ್ಲಿ ನಿಲ್ಲಬೇಕು. ಕೈಗಳೆರಡನ್ನೂ ಹೆಗಲಿನ ಮಟ್ಟಕ್ಕೆ ಇರುವಂತೆ ನೇರವಾಗಿ ಚಾಚಬೇಕು. ಆಮೇಲೆ ಬಲಪಾದವನ್ನು ಬಲಕಡೆಗೆ 900 ಗಳಷ್ಟು ತಿರುಗಿಸಿ ಉಸಿರನ್ನು ಹೊರಕ್ಕೆ ಬಿಟ್ಟು ಶರೀರವನ್ನು ಬಲಭಾಗಕ್ಕೆ ಬಾಗಿಸಬೇಕು. ಬಲಕೈಯನ್ನು ಬಲಕಾಲಿನ ಪಕ್ಕದಲ್ಲಿ ಇಡಬೇಕು. ಆಗ ದೃಷ್ಟಿಯು ಎಡಕೈ ಬೆರಳ ಮೇಲಿರಬೇಕು. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷ ಇರಬೇಕು. ಅದೇ ರೀತಿ ಎಡ ಭಾಗದಲ್ಲಿ ಅಭ್ಯಸಿಸಬೇಕು. ಅನಂತರ 2 ನಿಮಿಷ ವಿಶ್ರಾಂತಿ.

ಉಪಯೋಗಗಳು: ತ್ರಿಕೋಣಾಸನ ಅಭ್ಯಾಸದಿಂದ ಕಾಲುಗಳ ಮಾಂಸಖಂಡಗಳು ಚೆನ್ನಾಗಿ ಪಳಗುತ್ತವೆ. ಕಾಲುಗಳ ಸಾಮಾನ್ಯ ವಕ್ರತೆಯನ್ನು ಸರಿಪಡಿಸಬಹುದಾಗಿದೆ. ಹಾಗೂ ಬೆನ್ನು ನೋವು, ಕುತ್ತಿಗೆ ನೋವು, ಸೊಂಟ ನೋವು ಪರಿಹಾರವಾಗುತ್ತದೆ. ಮೊಣಕೈಗಳು ಬಲಗೊಳ್ಳುತ್ತವೆ. ಚಪ್ಪಟೆ ಪಾದವಾಗುವ ತೊಂದರೆಯನ್ನು ತಡೆಯುತ್ತದೆ. ಮೀನ ಖಂಡ ತೊಡೆ ಹಾಗೂ ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನು ಹುರಿಯ ಬಳಕುವಿಕೆ ಮತ್ತು ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಸೂಚನೆ:  ಸ್ಲಿಪ್ ಡಿಸ್ಕ್, ಸಯಟಿಕಾ ತೊಂದರೆಗಳಿದ್ದಲ್ಲಿ ಮತ್ತು ಉದರ ಭಾಗದ ಶಸ್ತ್ರಚಿಕಿತ್ಸೆಯಾಗಿದ್ದಲ್ಲಿ  ತ್ರಿಕೋಣಾಸನ ಮಾಡಬೇಡಿ. ಅತಿಯಾಗಿ ಪಾರ್ಶ್ವಭಾಗವನ್ನು ಉದ್ದ ಮಾಡಬೇಡಿ ಮತ್ತು ಮಿತಿಮೀರಿ ಮಾಡಬೇಡಿ. ಪಾದವನ್ನು ಕೈಗಳಿಂದ ಸ್ಪರ್ಶಿಸಲು ಅಸಾಧ್ಯವಾದಲ್ಲಿ ಮೊಣಕಾಲಿನವರೆಗೆ ಮಾತ್ರ ಕೈಗಳನ್ನು ಒಯ್ಯಿರಿ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com