Breaking News

ಎಂಸಿಸಿ ಬ್ಯಾಂಕ್ ನಲ್ಲಿ ಮಹಿಳಾ ದಿನಾಚರಣೆ: ಸಿಬ್ಬಂದಿಗೆ ಸನ್ಮಾನ

 

ಕರಾವಳಿ ಡೈಲಿನ್ಯೂಸ್

ಮಂಗಳೂರು: ಇಲ್ಲಿನ ಎಂಸಿಸಿ ಬ್ಯಾಂಕ್  ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಬ್ಯಾಂಕಿನ ಮಹಿಳಾ ಸಿಬ್ಬಂದಿ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಮಹಿಳಾ ದಿನಾಚರಣೆಯನ್ನು ಶನಿವಾರ ಆಚರಣೆ ಮಾಡಲಾಯಿತು.

ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರು ಸ್ವಾಗತಿಸಿ ಮಾತನಾಡಿ, ಬ್ಯಾಂಕಿನ ಮಹಿಳಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ, ಮಹಿಳಾ ದಿನಾಚರಣೆ ಪ್ರಾಮುಖ್ಯತೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಮಹತ್ವದ ಕೊಡುಗೆ ಬಗ್ಗೆ ವಿವರಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೆವರೆಂಡ್ ಸಿಸ್ಟರ್ ಸಿಸಿಲಿಯ ಮೆಂಡೊನ್ಸಾ ಅವರು  ಎಂಸಿಸಿ ಬ್ಯಾಂಕ್ ಮಹಿಳಾ ಸಿಬ್ಬಂದಿ ಅಭಿನಂದಿಸಿ ಮಾತನಾಡಿ,  ಸಮಾಜಕ್ಕೆ ಮಹಿಳೆಯ ಮಹತ್ವದ ಕೊಡುಗೆ ಬಗ್ಗೆ ಜಾಗ್ರತಿ ಮೂಡಿಸುವುದು, ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಗೌರವದ ಮಹತ್ವವನ್ನು ಸಾರುವುದು ಮಹಿಳಾ ದಿನಾಚರಣೆ ಮುಖ್ಯ ಉದ್ದೇಶ. ಮಧರ್ ತೆರೆಸಾ ಅವರು ಕುಷ್ಟ ರೋಗಿಗಳಿಗೆ, ಬಡವರಿಗೆ ಮತ್ತು ಸಮಾಜದಲ್ಲಿ ಹಿಂದುಳಿದವರಿಗೆ ಸಲ್ಲಿಸಿದ ಅನುಕರಣೀಯ ಸೇವೆಗಳನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಬ್ಯಾಂಕ್  ನಿರ್ದೇಶಕ ಆಂಡ್ರ್ಯೂ ಡಿಸೋಜ ಅವರು ಬ್ಯಾಂಕಿನ ಎಲ್ಲಾ ಮಹಿಳೆಯರಿಗೆ ಅಭಿನಂದಿಸಿ, ಕುಟುಂಬದ ಶ್ರೇಯೋಭಿವೃದ್ದಿಗೆ ಮಹಿಳೆಯರು ವಹಿಸುವ ಪಾತ್ರದ ಬಗ್ಗೆ ವಿವರಿಸಿದರು.

  1.  

ಮಹಿಳಾ ಸಬಲೀಕರಣ ಮತ್ತು ಪ್ರಗತಿ ಕುರಿತು ನಿರ್ದೇಶಕಿ ಐರಿನ್ ರೆಬೆಲ್ಲೊ ಮತನಾಡಿದರು. ವೇದಿಕೆಯಲ್ಲಿ ಆಸೀನರಾಗಿದ್ದ ಮುಖ್ಯ ಅತಿಥಿ, ಬ್ಯಾಂಕಿನ ನಿರ್ದೇಶಕರು ಮತ್ತು ಶಾಖಾ ಪ್ರಬಂಧಕರನ್ನು ಸನ್ಮಾನಿಸಲಾಯಿತು.

ಮಹಿಳಾ ಸಿಬ್ಬಂದಿ ಪರವಾಗಿ ಕಂಕನಾಡಿ ಶಾಖಾ ಪ್ರಬಂಧಕಿ ಐಡಾ ಪಿಂಟೊ ಮಾತನಾಡಿ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಕ್ಕಾಗಿ ಮಹಿಳಾ ಸಿಬ್ಬಂದಿ ಪರವಾಗಿ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ  ಭಾಗವಹಿಸಿದ ಎಲ್ಲಾ ಮಹಿಳಾ ಸಿಬ್ಬಂದಿಗೆ ಬ್ಯಾಂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೂಗೂಚ್ಛ ನೀಡಿ ಶುಭಾಶಯ  ಕೋರಿದರು. ಬ್ಯಾಂಕ್ ಸೇವೆ ಸಲ್ಲಿಸಿ ನಿವೃತರಾದ ಶಾಖಾ ವ್ಯವಸ್ಥಾಪಕ ಕ್ಲಿಫರ್ಡ್ ಡಿಕೊಸ್ತಾ ಮತ್ತು ಕಿರಿಯ ಸಹಾಯಕ ವಿಲಿಯಮ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮಹಿಳೆಯರ ಕುರಿತಾಗಿ ರಚಿಸಿದ ತಮ್ಮ ಸ್ವಂತ ಕವಿತೆಯನ್ನು ವಾಚಿಸಿದರು. ಬಂದರ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಪುನಿತ್ ಗಾಂವ್‍ಕರ್ ಮಾತನಾಡಿ,  ವಂಚಕರು ಸಾಮಾಜಿಕ ಮಧ್ಯಮಗಳಲ್ಲಿ ವಂಚನೆಗೆ ಬಳಸುವ ವಿವಿಧ ವಿಧಾನಗಳನ್ನು ವಿವರಿಸಿದರು. ವಿವಿಧ ಸೈಬರ್ ಅಪರಾಧಗಳನ್ನು ತಡೆಗಟ್ಟಲು

ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಬಗ್ಗೆ ತಿಳಿಸಿ, ಯಾವುದೇ ಸೈಬರ್ ಅಪರಾಧಗಳನ್ನು ತಕ್ಷಣವೇ ವರದಿ ಮಾಡಲು ತುರ್ತು ಸಂಖ್ಯೆ 112  ಮತ್ತು ಅಪರಾಧ ಸಹಾಯ ಸಂಖ್ಯೆ 1930 ಗೆ ಕರೆ ಮಾಡುವ ಮೂಲಕ  ಪೊಲೀಸ್ ಸೇವೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಎಲ್‍ರೋಯ್ ಕ್ರಾಸ್ಟೊ, ಸಿ.ಜಿ. ಪಿಂಟೊ, ಜೆ.ಪಿ. ರೊಡ್ರಿಗಸ್, ಅನಿಲ್ ಪತ್ರಾವೊ, ಡಾ. ಜೆರಾಲ್ಡ್ ಪಿಂಟೊ, ಮಾರ್ಸೆಲ್ ಎಮ್ ಡಿಸೋಜ, ಡೆವಿಡ್ ಡಿಸೊಜ, ಫೆಲಿಕ್ಸ್ ಡಿಕ್ರುಜ್, ಸುಶಾಂತ್ ಸಲ್ಡಾನ್ಹಾ, ಉಪ ಮಹಾಪ್ರಬಂಧಕ ರಾಜ್ ಮಿನೇಜಸ್, ಹಿರಿಯ ಪ್ರಬಂಧಕ ಡೆರಿಲ್ ಲಸ್ರಾದೊ ಮತ್ತು ಸಿಬ್ಬಂದಿಳು ಹಾಜರಿದ್ದರು. ಸಭಾ ಕಾರ್ಯದ ನಂತರ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ರೆವರೆಂಡ್ ಸಿಸ್ಟರ್ ಸಿಸಿಲಿಯ ಮೆಂಡೊನ್ಸಾ ಪ್ರೆವಿನ್ಸಿಯಲ್ ಸುಪಿರೀಯರ್, ಬೆಥನಿ ಕೊಂಗ್ರಿಗೇಶನ್, ವಾಮಂಜೂರು, ಬ್ಯಾಂಕಿನ ನಿರ್ದೇಶಕಿಯರಾದ ಐರಿನ್ ರೆಬೆಲ್ಲೊ, ಡಾ ಫ್ರೀಡಾ ಪ್ಲಾವಿಯ ಡಿಸೋಜ, ಶರ್ಮಿಳಾ ಮಿನೇಜಸ್, ಬ್ಯಾಂಕ್ ಶಾಖಾ ಪ್ರಬಂಧಕ ಜೆಸಿಂತಾ ಸೆರಾವೊ, ಬ್ಲಾಂಚ್ ಫರ್ನಾಂಡಿಸ್, ಸುನಿತಾ ಡಿಸೊಜ, ಐಡಾ ಪಿಂಟೊ, ಐರಿನ್ ಡಿಸೋಜ, ಜೆಸಿಂತಾ ಫರ್ನಾಂಡಿಸ್ ಮತ್ತು ವಿಲ್ಮಾ ಜ್ಯೋತಿ ಸಿಕ್ವೇರ ಇದ್ದರು.

ನೆಲ್ಸನ್ ಮೋನಿಸ್ ನಿರೂಪಿಸಿ, ಮಹಾ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com