Breaking News

ದ.ಕ. ಜಿಲ್ಲೆ: ಪಿಯುಸಿ ಪರೀಕ್ಷೆಗೆ ಮೊದಲ ದಿನ 242 ವಿದ್ಯಾರ್ಥಿಗಳು ಗೈರು

 

ಮಂಗಳೂರು: ದ್ವಿತೀಯ ಪದವಿ ಪೂರ್ವ ಪರೀಕ್ಷೆ ರಾಜ್ಯದಾದ್ಯಂತ ಗುರುವಾರ ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ದಿನ ಒಟ್ಟು 19,303 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

  1.  

ಮೊದಲ ದಿನ ನಡೆದ ಕನ್ನಡ ವಿಷಯದ ಪರೀಕ್ಷೆಗೆ ವಿವಿಧ ಪದವಿ ಪೂರ್ವ ಕಾಲೇಜುಗಳ 216 ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 26  ಮಂದಿ ಸೇರಿ ಒಟ್ಟು 242 ವಿದ್ಯಾರ್ಥಿಗಳು ಗೈರಾದರು. ಅರೇಬಿಕ್ ಭಾಷಾ ಪರೀಕ್ಷೆಗೆ ಎಲ್ಲ 134 ವಿದ್ಯಾರ್ಥಿಗಳೂ ಹಾಜರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ 52 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು ಪರೀಕ್ಷೆಗಳು ನಡೆದವು. 15,171 ವಿದ್ಯಾರ್ಥಿಗಳು ಹಾಗೂ 16,051 ವಿದ್ಯಾರ್ಥಿನಿಯರು ಸೇರಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಒಟ್ಟು 31,222 ಮಂದಿ ದ್ವಿತೀಯ ಪಿ.ಯು. ಪರೀಕ್ಷೆ ಬರೆಯುವ ಅರ್ಹತೆ ಪಡೆದಿದ್ದಾರೆ. 1,342 ವಿದ್ಯಾರ್ಥಿಗಳು ಖಾಸಗಿಯಾಗಿ ಹಾಗೂ 1,102 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com