Breaking News

ಯುವ ಚಿತ್ರದ ಯುವರಾಜನಿಗೆ ಕಾಂತಾರ ಬೆಡಗಿ ಸಪ್ತಮಿಗೌಡ ರಾಣಿ!

 

ಬೆಂಗಳೂರು: ದೊಡ್ಮನೆಯ ಯುವ ರಾಜ್​ಕುಮಾರ್ ಅವರ​ ಯುವ ಸಿನಿಮಾಕ್ಕೆ  ಕಾಂತಾರ ಬ್ಯೂಟಿ ಸಪ್ತಮಿ ಗೌಡ ನಾಯಕಿ ಆಗಿ ಆಯ್ಕೆಯಾಗಿದ್ದಾರೆ.

ಯುವ ಎಂಬ ಶೀರ್ಷಿಕೆ ಇಟ್ಟುಕೊಂಡಿರುವ ಸಿನಿಮಾದಲ್ಲಿ ರಾಘವೇಂದ್ರ​ ರಾಜ್​ಕುಮಾರ್​ ಕಿರಿಯ ಪುತ್ರ ಯುವ ರಾಜ್​ಕುಮಾರ್​ ಅಭಿನಯಿಸುತ್ತಿದ್ದು, ಅಪ್ಪು ಮಾಡಬೇಕಾಗಿದ್ದ ಚಿತ್ರದಲ್ಲಿ ಯುವ ನಟಿಸ್ತಿದ್ದಾರೆ ಅಂತಾ ಗೊತ್ತಾದ ಘಳಿಗೆಯಿಂದ ದೊಡ್ಮನೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

  1.  

ಈ ಯುವರಾಜನಿಗೆ ಯಾರು ರಾಣಿ ಯಾರು ಆಗ್ತಾರೆ ಅಂತಾ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಆಗಿತ್ತು. ಇದೀಗ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಟ್ವಿಟರ್​ ಪೇಜ್​ನಲ್ಲಿ ‘ಯುವ’ ನಾಯಕಿ ಗೊಂದಲಕ್ಕೆ ತೆರೆ ಎಳೆದಿದೆ. ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ಫೋಟೋವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್​, ಯುವರಾಜನ ಅರಸಿಗೆ ಆದರದ ಸ್ವಾಗತ ಎಂದು ಬರೆದು ಕೊಂಡಿದೆ. ಜೊತೆಗೆ ‘ಯುವ’ ಸಿನಿಮಾಗೆ ಸಪ್ತಮಿ ಗೌಡ ಪರ್ಫೆಕ್ಟ್​ ನಾಯಕಿ ಎಂದು ಹೇಳಿದೆ. ಈ ಮೂಲಕ ಕಾಂತಾರ ಬ್ಯೂಟಿ ಸಪ್ತಮಿ ಗೌಡ ಯುವ ಸಿನಿಮಾಗೆ ನಾಯಕಿಯಾಗಿ ಫೈನಲ್​ ಆಗಿದ್ದಾರೆ.

ಪುನೀತ್ ರಾಜ್​ಕುಮಾರ್ ಜನ್ಮದಿನದಂದು  ಯುವ ಚಿತ್ರದ ಶೂಟಿಂಗ್​​ ಆರಂಭ ಆಗಲಿದ್ದು, 2023ರ ಡಿಸೆಂಬರ್ 22ರಂದು ಸಿನಿಮಾ ತೆರೆ ಕಾಣಲಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com