Breaking News

ಬನವಾಸಿ ಕದಂಬೋತ್ಸವ ಸಾಹಿತಿ ಬಾಬು ಕೃಷ್ಣಮೂರ್ತಿಗೆ ಪಂಪ ಪ್ರಶಸ್ತಿ ಪ್ರದಾನ

 

ಕರಾವಳಿ ಡೈಲಿನ್ಯೂಸ್

ಕಾರವಾರ (ಬನವಾಸಿ): ಆದಿ ಕವಿ ಪಂಪ ಬನವಾಸಿಯನ್ನು ವರ್ಣನೆ ಮಾಡಿದ ಮಾದರಿಯಲ್ಲಿಯೇ ಬನವಾಸಿ ಅಭಿವೃದ್ಧಿ ಸರ್ಕಾರ ವಿಶೇಷ ಒತ್ತು ನೀಡಲಿದೆ. ಮಾಡಲಾಗುತ್ತದೆ. ಪ್ರವಾಸಿ ತಾಣವಾಗಿ, ಐತಿಹಾಸಿ ಪ್ರವಾಸೋದ್ಯಮ ಅಭಿವೃದ್ದಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಹಮ್ಮಿಕೊಂಡಿದ್ದ ಕದಂಬೋತ್ಸವ ಕಾರ್ಯಕ್ರಮ ಹಾಗೂ ಸಾಹಿತಿ ಬಾಬು ಕೃಷ್ಣಮೂರ್ತಿ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕದಂಬರು ಇಲ್ಲದೇ ರಾಜ್ಯದ ಇತಿಹಾಸ ಪೂರ್ಣ ಆಗುವುದಿಲ್ಲ. ಪರಕೀಯರ ವಿರುದ್ಧ ಸಿಡಿದು ಕದಂಬ ರಾಜ್ಯವನ್ನು ಸ್ಥಾಪನೆ ಮಾಡಿದರು ಬನವಾಸಿ ಕದಂಬರು. ಪಲ್ಲವರಿಂದ ಈ ನಾಡನ್ನು ಮುಕ್ತಿಗೊಳಿಸಿ, ಕನ್ನಡ ರಾಜಧಾನಿ ಬನವಾಸಿಯನ್ನು ಸ್ಥಾಪನೆ ಮಾಡಿದ ಮೊದಲ ಕನ್ನಡದ ರಾಜಮನೆತನ ಬನವಾಸಿ ಕದಂಬರದು. ಪಂಪ ಮಹಾಕವಿಗೆ ಬನವಾಸಿ ಮೇಲೆ ಇರುವಂತಹ ವಿಶೇಷ ಪ್ರೀತಿಯೇ ಇದರ ಅಭಿವೃದ್ದಿಗೆ ಸಾಕ್ಷಿ. ಅಲ್ಲಮಪ್ರಭು ಅನುಭವ ಮಂಟಪವು ಬನವಾಸಿಯಲ್ಲಿದೆ ಎಂದರು.

  1.  

ಕಲೆಗೆ ಆಗಿನ ಕಾಲದಲ್ಲಿ ಎಷ್ಟು ಮಹತ್ವ ನೀಡುತ್ತಿದ್ದರು ಎಂಬುದು ಇಲ್ಲಿನ ಶಿಲ್ಪಕಲೆಗಳಿಗೆ ಸಾಕ್ಷಿ ಆಗಿದೆ. ಈ ಭಾಗದ ಕೆರಗಳಿಗೆ ನೀರಿನ ಕೊರತೆ ಆಗುವ ಉದ್ದೇಶದಿಂದ ಕರೆಗೆ ನೀರು ತುಂಬುವ ಯೋಜನೆ ಸಾಕಾರಗೊಳಿಸಲಾಗಿದೆ. ಈ ಭಾಗದಲ್ಲಿ 3 ಏತ ನೀರಾವರಿ ಯೋಜನೆಗಳನ್ನು ನಿರ್ಮಾಣ ಮಾಡಲಾಗಿದೆ. ಶಿವರಾಮ ಹೆಬ್ಬಾರ್ ಅವರು ಭಗೀರಥ ಎಂಬ ಹೆಸರು ನೀಡಲಾಗಿದೆ. ಬನವಾಸಿ, ಮುಂಡಗೋಡ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.

ಬಜೆಟ್ ನಲ್ಲಿ ರಾಜ ಮನೆತನಗಳಿಗೆ ಗತವೈಭವ ಮರುಕಳಿಸಲು ವಿಶೇಷ ಅನುದಾನ ನೀಡಲಾಗಿದೆ. ಪುರಾತನ ದೇವಾಲಯಗಳಿಗೆ ಕಾರಿಡಾರ್ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.

ಸಚಿವರಾದ ಶಿವರಾಮ ಹೆಬ್ಬಾರ್, ಕೋಟ ಶ್ರೀನಿವಾಸ್ ಪೂಜಾರಿ, ಗೋವಿಂದ ಕಾರಜೋಳ, ಶಾಸಕರಾದ ರೂಪಾಲಿ ನಾಯ್ಕ, ಶಾಂತಾರಾಮ ಸಿದ್ದಿ, ಪ್ರಮೋದ್ ಹೆಗಡೆ, ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com