Breaking News

ಇದೇ 28 ರಿಂದ ಮಳಗಿ ಮಾರಿಕಾಂಬಾ ದೇವಿ ಜಾತ್ರೆ

 

ಮುಂಡಗೋಡ: ಮಳಗಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಫೆ.28 ರಿಂದ ಮಾರ್ಚ್ 8 ರವರಿಗೆ ನಡೆಯಲಿದೆ. ಫೆ. 28 ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆಯು ದೇವಸ್ಥಾನದ ಎದುರಿನ ಮಂಟಪದಲ್ಲಿ ನಡೆಯಲಿದ್ದು,ನಂತರದಲ್ಲಿ ರಾಜೋಪಚಾರಾದಿ ವಿನಿಯೋಗಗಳು ನಡೆಯಲಿವೆ.

  1.  

ಮಾರ್ಚ್ 1 ರಂದು  ಶ್ರೀ ದೇವಿಯ ರಥಾರೋಹಣ ಮೆರವಣಿಗೆ ಬೆಳಿಗ್ಗೆ 8.30 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1-30 ನಂತರ ಜಾತ್ರಾ ಸ್ಥಳದ ಪೀಠದಲ್ಲಿ ಸ್ಥಾಪನೆಯಾಗಲಿದೆ.‌ ಮಾರ್ಚ್ 2 ರಿಂದ ಮಾರ್ಚ್ 7 ರವರೆಗೆ ಸೇವೆಗಳು ಪ್ರಾರಂಭವಾಗಲಿದ್ದು, ಹಣ್ಣು ಕಾಯಿ, ಹರಕೆ, ಕಾಣಿಕೆ, ತುಲಾಭಾರ, ವಗೈರೆ ಸೇವೆಗಳು ನಡೆಯಲಿದೆ. ಮಾರ್ಚ್ 8 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಹಣ್ಣುಕಾಯಿ  ಸೇವೆ ನಡೆಯಲಿದ್ದು, ಹರಾಜು ಕಾರ್ಯಕ್ರಮವು ಮಧ್ಯಾಹ್ನ 2-30 ರಿಂದ ನಡೆಯಲಿದೆ.

ಜಾತ್ರಾ ಪೆಂಡಾಲ್ನಲ್ಲಿ ಪ್ರತಿ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ದೇವಿಯ ಪುನರ್ಪ್ರತಿಷ್ಠಾಪನೆ ಮಾರ್ಚ್ 22 ರಂದು ಯುಗಾದಿ ದಿನ ಬೆಳಿಗ್ಗೆ 10-30 ರಿಂದ ಪ್ರಾರಂಭವಾಗಲಿದೆ ಎಂದುಸಮಿತಿತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com