Breaking News

ಒಂದು ರನ್ ಔಟ್, ಭಾರತದ ಗೆಲುವಿಗೆ ಕೊಳ್ಳಿ: ಭಾವುಕ ಹರ್ಮನ್

 

ಕೇಪ್ ಟೌನ್: ಮಹಿಳೆರ ಟಿ 20 ವಿಶ್ವಕಪ್ ನಲ್ಲಿ ಭಾರತದ ತಂಡದ ಫೈನಲ್ ಕನಸು ಸೆಮಿ ಫೈನಲ್ ನಲ್ಲಿಯೇ ಭಗ್ನಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಪಡೆ 5 ರನ್ ಗಳ ಅಂತರದ ಹೀನಾಯ ಸೋಲು ತಂಡದ ನಿದ್ದೆಗೆಡಿಸಿದೆ.

ಆರಂಭಿಕ ಬ್ಯಾಟಿಂಗ್ ಮಾಡಿದಆಸೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 172 ರನ್ ದಾಖಲಿಸಿತು. ಭಾರತ ತಂಡವು 8 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತು.

  1.  

ಭರ್ಜರಿ ಅರ್ಧಶತಕ ಸಿಡಿಸಿ ಭಾರತದ ಗೆಲುವಿನ ಆಸೆ ಹುಟ್ಟಿಸಿದ್ದ ನಾಯಕಿ ಹರ್ಮನ್ ನಿರ್ಣಾಯಕ ಹಂತದಲ್ಲಿ ರನ್ ಔಟ್ ಆದರು. 34 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ದಾಖಲಿಸಿ 52 ರನ್ ಕಲೆ ಹಾಕಿದ್ದರು.

ಪಂದ್ಯ ಸೋತ ಬಳಿಕ ಹರ್ಮನ್ ಭಾವುಕರಾದರು. ಮಾತನಾಡುವ ವೇಳೆ ಕಪ್ಪು ಕನ್ನಡಕಧರಿಸಿ ಬಂದಿದ್ದ ಹರ್ಮನ್ ನಾನು ಅಳುವುದನ್ನು ನನ್ನ ದೇಶ ನೋಡುವುದು ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ಈ ಕನ್ನಡಕವನ್ನು ಧರಿಸಿದ್ದೇನೆ, ನಾನು ಭರವಸೆ ನೀಡುತ್ತೇನೆ, ನಮ್ಮ ಆಟದ ವೈಖರೀಯನ್ನು ಸುಧಾರಿಸಿಕೊಳ್ಳುತ್ತೇವೆ ಎಂದರು.

ಆರಂಭಿಕ ಸ್ಮತಿ ಮಂಧನಾ, ಶಫಾಲಿ ವರ್ಮ, ಯಾಸ್ತಿಕಾ ಭಾಟಿಯ ಅಲ್ಪ ಮೊತ್ತಕ್ಕೆ ಔಟಾದ ನಂತರ ತಂಡದ ಹೋರಾಟವನ್ನು ಜೆಮಿಮಾ ರೋಡ್ರಿಗ್ಸ್‌ ಮತ್ತು ಹರ್ಮನ್‌ಪ್ರೀತ್‌ ಮುಂದುವರೆಸಿದ್ದರು. ಇಬ್ಬರೂ 4ನೇ ವಿಕೆಟ್‌ಗೆ 69 ರನ್‌ ಒಗ್ಗೂಡಿಸಿದ್ದರು. ಈ ಹಂತದಲ್ಲಿ ಜೆಮಿಮಾ 24 ಎಸೆತಗಳಿಂದ 43 ರನ್‌ ಗಳಿಸಿ ಔಟಾದರು. ಹರ್ಮನ್ ಉತ್ತಮ ಫಾರ್ಮ್ ಬ್ಯಾಟಿಂಗ್ ಉತ್ತಮ ರನ್ ಕಲೆ ಹಾಕಿತ್ತು. ದುರದೃಷ್ಟವಶಾತ್‌ ಅವರು ರನ್ ಔಟ್ ಆದರು. ಆಗಲೂ ಪಂದ್ಯ ಭಾರತದ ನಿಯಂತ್ರಣದಲ್ಲೇ ಇತ್ತು. ಆದರೆ ಗೆಲ್ಲಿಸುವ ಮಟ್ಟದ ಇನಿಂಗ್ಸ್‌ ಯಾರಿಂದಲೂ ಬರಲಿಲ್ಲ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com