Breaking News

ಯಲ್ಲಾಪುರ ಶ್ರೀ ಗ್ರಾಮ ದೇವಿ ಜಾತ್ರೆಗೆ ಸಿಂಗಾರ

 

ಕಾರವಾರ (ಯಲ್ಲಾಪುರ):  ಇಲ್ಲಿನ ಶ್ರೀ ಗ್ರಾಮ ದೇವಿ ಜಾತ್ರೆಗೆ ಭರದ ಸಿದ್ಧತೆಗಳು ಫೂರ್ಣಗೊಂಡಿವೆ. ಜಾತ್ರೆಗಾಗಿ ಪಟ್ಟಣವನ್ನು ಸಿಂಗಾರ ಮಾಡಲಾಗಿದೆ.  5 ವರ್ಷಗಳ ನಂತರ ದೇವಿ ಜಾತ್ರೆ ನಡೆಯುತ್ತಿದೆ. ಇದೇ 22 ರಂದು ಮಧ್ಯಾಹ್ನ 3.30 ಕ್ಕೆ  ಶ್ರೀದೇವಿಯ ಮೆರವಣಿಗೆ ನಡೆಯಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಬರುವ ನಿರೀಕ್ಷೆಯಿದೆ. ಸಂಜೆ ವೇಳೆಗೆ ದೇವಿ ಗದ್ದುಗೆಯಲ್ಲಿ ವಿರಾಜಮಾನವಾಲಿದ್ದಾಳೆ.

  1.  

ಯಲ್ಲಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ದೇವಿ ಮೈದಾನದಲ್ಲಿ ಜಾತ್ರೆಯ ಪ್ರಮುಖ ಆಕರ್ಷಣೆ ಜಾತ್ರಾ ಮಂಟಪ ನಿರ್ಮಾಣ ಮಾಡಲಾಗಿದೆ. ಹಂಪಿಯ ಕಲ್ಲಿನ ಮಂಟಪದ ಮಾದರಿಯಲ್ಲಿ ಅದ್ಧೂರಿಯಾಗಿ ಸಿದ್ಧಪಡಿಸಲಾಗುತ್ತಿದೆ.  ಮಂಟಪದಲ್ಲಿ 29 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವೈಟಿಎಸ್ಎಸ್ ಮೈದಾನ, ಮಾದರಿ ಶಾಲೆಯ ಮೈದಾನ ಹಾಗೂ ಗದ್ದುಗೆಯ ಮುಂಭಾಗದಲ್ಲಿ ನಾನಾ ರೀತಿಯ ಅಮ್ಯೂಸ್ಮೆಂಟ್ ಪಾರ್ಕ್ ಬಂದಿವೆ. ಈಗಾಗಲೇ ತೊಟ್ಟಿಲು, ಟೊರಾಟೊರಾ, ಕೊಲಂಬಸ್, ಬ್ರೇಕ್ ಡಾನ್ಸ್ ಸೇರಿದಂತೆ ಬಹುತೇಕ ಎಲ್ಲ ಆಟಿಕೆಗಳನ್ನು ಜೋಡಿಸಲಾಗಿದೆ. ಬಾರಿ ವಿಶೇಷವಾಗಿ ರೇಂಜರ್ ಎನ್ನುವ ಮನರಂಜನಾ ಸಾಧನ ಬಂದಿದ್ದು, 100  ಮೀಟಟರ್  ಎತ್ತರಕ್ಕೆ ಜನರನ್ನು ಕೊಂಡೊಯ್ಯಲಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com