Breaking News

ಉಳ್ಳಾಲ ನಗರಸಭೆ- ಕಿವಿಗೆ ಹೂ ಮುಡಿದು ಬಂದ ಜೆಡಿಎಸ್ ಸದಸ್ಯರು: ವಾಗ್ವಾದ

 

ಉಳ್ಳಾಲ: ಇಲ್ಲಿನ ನಗರಸಭೆಯ ಬಜೆಟ್ ಮಂಡನೆ ವೇಳೆ ಬಜೆಟ್ ಅನ್ನು ವಿರೋಧಿಸಿದ ಜೆಡಿಎಸ್ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್, ಖಲೀಲ್, ಜಬ್ಬಾರ್, ಮುಷ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟುಕೊಂಡುವ ಬರುವ ಮೂಲಕ ಕಾಂಗ್ರೆಸ್ ಅನ್ನು ಅಣಕಿಸಿದರು.

ವಿಧಾನ ಸಭೆಯಲ್ಲಿ ಕಾಂಗ್ರೆಸ್ ಅನುಸರಿಸಿಸ ಮಾರ್ಗವನ್ನು ಉಳ್ಳಾಲ ನಗರ ಸಭೆಯಲ್ಲಿ ಜೆಡಿಎಸ್ ಸದಸ್ಯರು ಬಳಸಿದರು. ಆರಂಭದಲ್ಲಿ ಚೆನ್ನಾಗಿಯೇ ನಡೆದ ಸಭೆ ಕೊನೆಗೆ ಗದ್ದಲದಲ್ಲಿ ಅಂತ್ಯ ಕಂಡಿತು.

ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ, ಕಾಂಗ್ರೆಸ್ ಬಜೆಟ್‌ಗೆ ಬೆಂಬಲ ಸೂಚಿಸಿದರೆ, ಜೆಡಿಎಸ್‌ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ ಎಂದ ತಕ್ಷಣವೇ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲ್ ಅನ್ನು ಬಡಿದು ಬೆಂಬಲ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ನ ದಿನಕರ್ ಉಳ್ಳಾಲ್, ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿವೆ. ನೀವಿಬ್ಬರು ಒಂದೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.

  1.  

ಆಡಳಿತ- ವಿರೋಧ ಪಕ್ಷಗಳ ನಡುವೆ ವಾಗ್ವಾದ ಉಂಟಾಯಿತು. ಅಧ್ಯಕ್ಷತೆ ವಹಿಸಿದ್ದ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಅವರು ಗದ್ದಲ, ಗಲಾಟೆ ನಡುವಯೇ ರಾಷ್ಟ್ರಗೀತೆ ಹಾಡುವುದಕ್ಕೆ‌ ಸೂಚನೆ ನೀಡಿದರು.

ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಕ್ಕೆ‌ ಆಕ್ಷೇಪಿಸಿದ ಎಸ್‌ಡಿಪಿಐ ಸದಸ್ಯ ಅಸ್ಗರ್ ಆಲಿ, ಸಭೆ ಸಂಪೂರ್ಣಗೊಂಡಿಲ್ಲ ಎಂದು ದಾಖಲಿಸುವಂತೆ ಒತ್ತಾಯಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ನ ಭಾರತಿ ಮತ್ತು ವೀಣಾ ಶಾಂತಿ ಡಿ‌ಸೋಜ ಅಸ್ಗರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಹೇಳಿದ್ದು ಎಸ್ಡಿಪಿಐ ಸದಸ್ಯರನ್ನು ಕೆರಳಿಸಿತು.‌ ಈ ವೇಳೆ ಮಾತಿನ ಚಕಮಕಿ ಹಾಗೂ ಗಲಾಟೆ ನಡೆಯಿತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com