Breaking News

ಪೌರಕಾರ್ಮಿಕರ ನೇಮಕಾತಿ ವಿರುದ್ಧ ಸ್ಥಳೀಯರ ಕಿಚ್ಚು: ಪ.ಪಂಗೆ ಮುತ್ತಿಗೆ

 

ಕಾರವಾರ (ಹೊನ್ನಾವರ): ತಾಲೂಕಿನ ಮಂಕಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ಮಾಡುವ ಮೂಲಕ ತಮಗೆ ಬೇಕಾದವರಿಗೆ ನೇಮಕ ಮಾಡುವ ಹುನ್ನಾರ ನಡೆಯುತ್ತಿದೆ. ಆಯ್ಕೆ ಪ್ರಕ್ರಿಯೆ ತಡೆ ಹಿಡಿದು ಮರು ನೇಮಕಾತಿ ಮಾಡಬೇಕು ಎಂದು ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದರು.

ಜನರ ಗಮನಕ್ಕೆ ಬಾರದಂತೆ ಮಾಡಿ, ಪಟ್ಟಣ ಪಂಚಾಯಿತಿಯಲ್ಲಿ ಕೂಡ ಬಗ್ಗೆ ಯಾವುದೇ ಮಾಹಿತಿ ಹಾಕದೇ, ಕೇವಲ ಕೆಲವೇ ಪ್ರಭಾವಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ರೀತಿ ಮಾಡಲಾಗುತ್ತಿದೆ. ನೇಮಕಾತಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಸಂಶಯ ವ್ಯಜ್ತವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

3 ದಿನದಲ್ಲಿ  ನೇಮಕಾತಿ ಪ್ರಕ್ರಿಯೆ ತಡೆ ಹಿಡಿದು ಹೊಸ ನೇಮಕಾತಿ ಮಾಡಿಕೊಳ್ಳಬೇಕು. ರೀತಿ ಮಾಡದೇ ಇದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.

  1.  

ಘಟನೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯೇ ಕಾರಣ.  ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ಇನ್ನೂ ಪಟ್ಟಣ ಪಂಚಾಯತದ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ಮಾಡಿ ಹೊಸ ಅಧಿಕಾರಿಗಳು ಬರುವಂತಾಗ ಬೇಕು ಎಂದು ಜನರು ಆಗ್ರಹಿಸಿದರು.

ಶಾಸಕರ ವಿರುದ್ಧವೂ ಜನರು ಧಿಕ್ಕಾರ  ಕೂಗಿದರು. ಶಾಸಕ ಸುನೀಲ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಬೇಕಿತ್ತು, ಇಲ್ಲಿ ತನಕ ವಿಶೇಷ ಸಭೆ ಕರೆದಿಲ್ಲ, ಇನ್ನೂ ಕೂಡ ಚುನಾವಣೆ ನಡೆಯದೆ ಹಿನ್ನಲೆ ಶಾಸಕರು ಮಂಕಿ ಸಾರ್ವಜನಿಕರ ಕುಂದು ಕೊರತೆ ಸಭೆ ಕರೆಯಬೇಕಿತ್ತು ಕೆಲಸ ಅವರು ಮಾಡಿಲ್ಲ ಎನ್ನುವ ಆಕ್ರೋಶ ಕೇಳಿ ಬಂತು.

ವಸಂತ ಹಳ್ಳೆರ ಮಾತನಾಡಿ, ಹಿಂದೆ ಗ್ರಾಮ ಪಂಚಾಯಿತಿ ಇದ್ದಾಗ ನಮ್ಮ ಸಮಾಜಕ್ಕೆ ಎಲ್ಲಾ ಸೌಲಭ್ಯ ಸಿಗುತ್ತಿತ್ತು. ಪಟ್ಟಣ ಪಂಚಾಯಿತಿ ಆದ ಮೇಲೆ ಸೌಲಭ್ಯದಿಂದ ವಂಚಿತ ಆಗಬೇಕಾದ ಸ್ಥಿತಿ ಇದೆ. 29 ಪೌರಕಾರ್ಮಿಕರ ನೇಮಕಾತಿಯಲ್ಲಿ ಎಷ್ಟು ಮಂದಿಗೆ ಅವಕಾಶ ಇದೆ ಎಂದು ಬಹಿರಂಗ ಪಡಿಸಬೇಕು ಎಂದರು.

ಪ್ರತಿಭಟನೆಯಲ್ಲಿ ವನಿತಾ ನಾಯಕ್,  ಸತೀಶ್ ನಾಯ್ಕ್, ಚಂದ್ರಶೇಖರ್ ಗೌಡ, ಅಣ್ಣಯ್ಯ ನಾಯ್ಕ್, ರಾಜು ನಾಯ್ಕ್, ಗಜಾನನ ಡಿ ನಾಯ್ಕ್ ಅಣ್ಣಪ್ಪ ಜಿ.ನಾಯ್ಕ್, ರಘುವೀರ್ ಪ್ರಭು ಮಂಜುನಾಥ್ ನಾರಾಯಣ ನಾಯ್ಕ್, ವಿಜಯಾ ನಾಯ್ಕ್, ಅಣ್ಣಪ್ಪ ಎಚ್ ನಾಯ್ಕ್, ಅಣ್ಣಪ್ಪ ಎಂ ನಾಯ್ಕ್, ಸುಬ್ರಾಯ ನಾಯ್ಕ್, ಹನುಮಂತ ಗುಮ್ಮಯ್ಯ ನಾಯ್ಕ್, ಸರೋಜಾ ನಾಯ್ಕ್, ಗಿರೀಶ್ ನಾಯ್ಕ್ ಆನಂದ ನಾಯ್ಕ್, ಮಂಗಲದಾಸ ನಾಯ್ಕ್, ಗಣಪತಿ ನಾಯ್ಕ್, ಮಹಾಬಲೇಶ್ವರ ನಾಯ್ಕ್, ಶ್ರೀಕಾಂತ್ ನಾಯ್ಕ್, ಉಲ್ಲಾಸ್ ನಾಯ್ಕ್, ರಾಜೇಶ್ ನಾಯ್ಕ್, ಲೋಕೇಶ್ ನಾಯ್ಕ್, ಪೀಟರ್ ರೊಡ್ರಗ್ರೀಸ್, ಧರ್ಮ ನಾಯ್ಕ್, ನಾಗೇಶ್ ನಾಯ್ಕ್, ಈಶ್ವರ್ ನಾಯ್ಕ್, ವಿಘ್ನೇಶ್ವರ ನಾಯ್ಕ್, ಸುರೇಶ್ ನಾಯ್ಕ್, ಪ್ರಮೋದ್ ನಾಯ್ಕ್, ರವಿ ನಾಯ್ಕ್, ಸಂತೋಷ್ ನಾಯ್ಕ್, ದಿನೇಶ್ ನಾಯ್ಕ್, ಜಾನಕಿ ನಾಯ್ಕ್, ಭಾರತಿ ನಾಯ್ಕ್ ಸುನಂದ ನಾಯ್ಕ್, ಜ್ಯೋತಿ ನಾಯ್ಕ್, ಸಖು ಸಂತೋಷ್ ನಾಯ್ಕ್, ವಸಂತ್ ಹಳ್ಳೆರ್, ಈಶ್ವರ ಹಳ್ಳೆರ, ಜಟ್ಟಿ ಹಳ್ಳೆರ, ಸಂಜೀವಿನಿ ಸ್ವಸಹಾಯ ಸಂಘದ ಒಕ್ಕೂಟದ ಸದಸ್ಯರು, ಸ್ಥಳೀಯ ಸ್ವಸಹಾಯ ಗುಂಪಿನ ಸದಸ್ಯರು, ಮಂಕಿ ವ್ಯಾಪ್ತಿಯ ಜನರು ಪಾಲ್ಗೊಂಡಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com