Breaking News

ಗಾಯದ ಸಮಸ್ಯೆ: ವಾರ್ನರ್ ಆಟದಿಂದ ಹೊರಗೆ

 

ಇಂಧೋರ್: ನವದೆಹಲಿಯಲ್ಲಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಗಾಯಗೊಂಡಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಆಟದಿಂದ ಹೊರಬಿದ್ದಿದ್ದಾರೆ.

ವಾರ್ನರ್ ಅವರು ಎರಡನೇ ಟೆಸ್ಟ್‌ನಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಗಾಯಗಳಿಗೆ ಒಳಗಾದರು. ಮೊಹಮ್ಮದ್ ಸಿರಾಜ್ ಚೆಂಡು ವಾರ್ನರ್ ಅವರ ಮೊಣಕೈಗೆ ಬಡಿದಿತ್ತು. ಗಾಯಗೊಂಡ ಅವರ ಬದಲು ದಿಲ್ಲಿ ಪಂದ್ಯದಲ್ಲಿ ರೆನ್ಯ್ಶಾ ಆಡಿದ್ದರು.

  1.  

ಡೇವಿಡ್ ವಾರ್ನರ್ ಭಾರತದ ಟೆಸ್ಟ್ ಪ್ರವಾಸದಿಂದ ಹೊರಗುಳಿದಿದ್ದು, ತವರಿಗೆ ಮರಳಲಿದ್ದಾರೆ. ನವದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ವಾರ್ನರ್ ಮೊಣಕೈಗೆ ಬಡಿದು ಹೇರ್ ಲೈನ್ ಫ್ರಾಕ್ಚರ್ ಗೆ ಒಳಗಾಗಿದ್ದರು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಪ್ರಕಟಣೆ ತಿಳಿಸಿದೆ.

ವಾರ್ನರ್ ಅವರು ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಟೆಸ್ಟ್ ಸರಣಿಯ ಬಳಿಕ ನಡೆವ ಏಕದಿನ ಸರಣಿಗಾಗಿ ತಂಡ ಸೇರಿಕೊಳ್ಳಬಹುದು. ಮಾರ್ಚ್ 17 ರಿಂದ 22 ರವರೆಗೆ ಏಕದಿನ ಸರಣಿ ನಡೆಯಲಿವೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com