Breaking News

ಜನರ ಸ್ಪಂದನೆಗೆ ಮನೆ ಬಾಗಿಲಿಗೆ ಜಿಲ್ಲಾಡಳಿತ: ಡಿಸಿ ಕವಳಿಕಟ್ಟಿ

 

ಕಾರವಾರ (ಕುಮಟಾ): ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತವು ಬರುವ ಮೂಲಕ ಜನರ ಕಷ್ಟ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಸರ್ಕಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಾರಂಭಿಸಿದೆ. ಇದನ್ನು ಸಫಲತೆಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತ, ತಾಲೂಕಾ ಆಡಳಿತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು  ಮಾತನಾಡಿದರು.

ಸಾರ್ವಜನಿಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು  ಲಿಖಿತವಾಗಿ ನೀಡಿ ಹಾಗೂ ಸಾಮೂಹಿಕ ಸಮಸ್ಯೆಗಳನ್ನು  ನೇರವಾಗಿ ತಿಳಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ   ಸೂಚಿಸಿದರು.  ವೈಯಕ್ತಿಕ ಸಮಸ್ಯೆಗಳಿಗೆ ಸಲ್ಲಿಸಿದ ಮನವಿಗಳನ್ನು  ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಿ  ಕೂಡಲೆ ಅಂತಹ ಮನವಿಗಳನ್ನು  ಇತ್ಯರ್ಥ ಪಡಿಸಿ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.

ಬಸ್, ಒತ್ತುವರಿ ಹಾಗೂ ಕಂದಾಯ ಇಲಾಖೆಯ  ಸರ್ವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ  ಅವುಗಳನ್ನು  ಕೂಲಂಕುಷವಾಗಿ ಪರಿಶೀಲನೆ ಮಾಡಿ ಅವುಗಳಿಗೆ ಪೂರಕ ಪರಿಹಾರ ಒದಗಿಸಲಾಗುವುದು ಎಂದರು.

  1.  

ತಹಶೀಲ್ದಾರ್ ವಿವೇಕ್ ಶೇನ್ವಿ ಮಾತನಾಡಿ,  ಪ್ರತಿ 3 ನೇ ಶನಿವಾರ ಜಿಲ್ಲೆಯ ಆಯ್ದ ಗ್ರಾಮವನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿ ನಡೆದ ಹಳ್ಳಿ ಕಡೆ  ಕಾರ್ಯಕ್ರಮ ಮಾಡುವುದು ವಾಡಿಕೆ. ಬಾರಿ ಬರ್ಗಿ ಗ್ರಾಮವನ್ನು ಆಯ್ಕೆ ಮಾಡಿ ಇಲ್ಲಿನ ಜನರ ಅಹವಾಲು ಸ್ವೀಕರಿಸಿ ಮತ್ತು ಅವರುಗಳ ಸಮಸ್ಯೆಗಳನ್ನು ಆಲಿಸಿ  ಸ್ಥಳದಲ್ಲೇ ಪರಿಹಾರ ನೀಡುವುದು ಕಾರ್ಯಕ್ರಮದ ಉದ್ದೇಶ ಎಂದರು.

ಕೊಂಕಣ ರೈಲ್ವೆಯ ಯೋಜನೆಯಿಂದ ಭೂಮಿ ಕಳೆದು ಕೊಂಡಿದವರಿಗೆ ಪರಿಹಾರ, ಅಂಗನವಾಡಿ ಶಾಲೆ ಕಳಪೆ ಕಾಮಗಾರಿಗೆ  ಪರಿಹಾರ, ಗ್ರಾಮದಲ್ಲಿ ವಿದ್ಯತ್, ರೋಡ್ ಡಾಂಬರೀಕರಣ, ಚರಂಡಿ  ಪೈಪ್, ರಸ್ತೆ ಪಕ್ಕಾ ಚರಂಡಿ ನಿರ್ಮಾಣ, ಬೇಟಕುಳಿ ಸರ್ವಿಸ್ ರಸ್ತೆ,, ಶಾಲಾ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿವ ನೀರು,  ಬಾವಿಗಳಿಗೆ ಉಪ್ಪು ನೀರು ಸೇರ್ಪಡೆಗೆ ಪರಿಹಾರ,  ಬಸ್ ನಿಲುಗಡೆಗೆ ವ್ಯವಸ್ಥೆ, ಪಿಂಚಣಿ, ಸಮುದಾಯದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕ, ಸಮುದಾಯ ಭವನ ಸ್ವಚ್ಛತೆ, ಮುಂತಾದ ಸಾರ್ವಜನಿಕ ಮನವಿಗಳನ್ನು ಜಿಲ್ಲಾಧಿಕಾರಿ ಆಲಿಸಿದರು.

ಸೂಕ್ತ ಪರಿಹಾರವನ್ನು ಕೂಡಲೇ ಒದಗಿಸುವಂತೆ  ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ  ತಂದು ಸೂಕ್ತ ಪರಿಹಾರ ವದಗಿಸಿರುವ ಬಗ್ಗೆ ಕೂಡಲೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಅಂಗವಿಕಲ ಪೋಷಿತ್ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷತೆ  ಮಂಜೂರಾತಿ ಆದೇಶ ಪ್ರತಿಗಳನ್ನು  ಫಲನುಭವಿಗಳಿಗೆ ವಿತರಿಸಿದರು.

ಕುಮಟಾ  ಉಪ ವಿಭಾಗಧಿಕಾರಿ ರಾಘವೇಂದ್ರ ಜಗಲಾಸರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶಾಲಾಕ್ಷಿ ಪಟಗಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ, ತಾಲೂಕ ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ನಾಗರತ್ನ ನಾಯ್ಕ, ಎಸಿಎಫ್ ಲೋಹಿತ್, ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ  ಅಧಿಕಾರಿಗಳು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com