Breaking News

ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮೀರಿದ ವಿರಾಟ್ ಕೊಹ್ಲಿ

 

ಹೊಸದಿಲ್ಲಿ: ಅಂತರ ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಬೇಗನೆ 25,000 ರನ್ ಪೂರೈಸಿದ ಬ್ಯಾಟ್ಸ್ ಮನ್  ಎನಿಸಿಕೊಂಡ ಆಟಗಾರ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದರು.

ನವದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ 3 ನೇ ದಿನ ಭಾನುವಾರ ಕೊಹ್ಲಿ ಸಾಧನೆ ಮಾಡಿದ್ದಾರೆ.  ವಿರಾಟ್ ಕೊಹ್ಲಿ ಅವರು ಮಾಸ್ಟರ್ ಬ್ಲಾಸ್ಟರ್ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮೀರಿದ್ದಾರೆ.

  1.  

ವಿರಾಟ್ 549 ಪಂದ್ಯಗಳಲ್ಲಿ ಸಾಧನೆ ಮಾಡಿದ್ದು,  ವಿರಾಟ್ ಹಾಗೂ ಸಚಿನ್ ನಂತರ ರಿಕಿ ಪಾಂಟಿಂಗ್ (588), ಜಾಕ್  ಕಾಲಿಸ್ (594), ಕುಮಾರ ಸಂಗಕ್ಕರ (608) ಹಾಗೂ ಮಹೇಲ ಜಯವರ್ಧನೆ (701) ಅವರಿದ್ದಾರೆ.

ಭಾರತದ ಆರಂಭಿಕ ಬ್ಯಾಟ್ಸ್ಮನ್ಗಳಾದ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಬೇಗನೆ ನಿರ್ಗಮಿಸಿದ ನಂತರ ಕೊಹ್ಲಿ ಕ್ರೀಸ್ಗೆ ಬಂದರು.  ಭಾರತದ ಮಾಜಿ ನಾಯಕ 31 ಎಸೆತಗಳಲ್ಲಿ 20 ರನ್ಗಳಿಸಿ ಔಟಾದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com