Breaking News

ಕರಾವಳಿ ಅಭಿವೃದ್ಧಿಗಿಂತ, ಬಿಜೆಪಿ ಶಾಸಕರಿಗೆ ಲವ್ ಜಿಹಾದ್ ಮುಖ್ಯವೇ: ಖಾದರ್ ಪ್ರಶ್ನೆ

 

ಮಂಗಳೂರು:  ಕರಾವಳಿಯಲ್ಲಿ 12 ಬಿಜೆಪಿ ಶಾಸಕರಿದ್ದಗಲೂ ಬಜೆಟ್ ನಲ್ಲಿ ಅನುದಾನ ಸಿಕ್ಕಿಲ್ಲ. ಕರಾವಳಿ ಜನರಿಗೆ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಮಾತನ್ನು ಕೇಳಿರಬೇಕು. ಕರಾವಳಿಗೆ ಲವ್ ಜಿಹಾದ್ ಸಾಕು, ಅಭಿವೃದ್ಧಿ ಬೇಡ ಎಂಬ ವಿಚಾರ ಸಿಎಂ ಕಿವಿಗೆ ಬಿದ್ದಿರಬೇಕು.‌ ಹೀಗಾಗಿ ಭಾಗಕ್ಕೆ ಅನುದಾನವನ್ನೇ ಕೊಟ್ಟಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು. ಟಿ ಖಾದರ್  ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮೋಸ ಮಾಡಲಾಗಿದೆ.‌ ಮೀನುಗಾರರಿಗೆ ಮೋಸ ಮಾಡುತ್ತಿದ್ದಾರೆ. ರಸ್ತೆ, ಶೈಕ್ಷಣಿಕ, ಪಶು ಸಂಗೋಪನೆ ವಿಚಾರದಲ್ಲಿ ಜಿಲ್ಲೆಗೆ ಮೋಸ ಮಾಡಲಾಗಿದೆ.‌ ಪಶು ಸಂಗೋಪನೆಯ ಅಂಬುಲೆನ್ಸ್ ಗಳಿಗೆ ಇನ್ನು ಕೂಡ ಚಾಲಕರನ್ನು ನೇಮಕ ಮಾಡಿಲ್ಲ. ಜನರನ್ನು ಮೂರ್ಖರನ್ನಾಗಿ ಮಾಡುವ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಆರೋಪಿಸಿದರು.

  1.  

ಮೀನುಗಾರರಿಗೆ ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಿಸಿದ ಮನೆಗಳೇ ಇನ್ನೂ ನಿರ್ಮಾಣ ಮಾಡಿಲ್ಲ. ಸಮುದ್ರ ತೀರದಲ್ಲಿ ಕೊಂಡಿ ರಸ್ತೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕೊಟ್ಟಿಲ್ಲ. ಸಬ್ಸಿಡಿ ಸೀಮೆ ಎಣ್ಣೆಯನ್ನೂ ಕೊಟ್ಟಿಲ್ಲ, ಈಗ ಡಿಸೇಲ್ ಬಗ್ಗೆ ಹೇಳುತ್ತಿದ್ದಾರೆ ಎಂದರು.

 ರಾಜ್ಯವು ಸಾಲದಲ್ಲಿ ಮುಳುಗಿದೆ. ರಾಜ್ಯ ಬಜೆಟ್ ಸುಲಿಗೆ ಮತ್ತು ಸಾಲದ ಬಜೆಟ್ ಆಗಿದೆ. ಕೊನೆಯುಸಿರು ಎಳೆಯುತ್ತಿರುವ ಸರ್ಕಾರ ಯಾವುದೇ ಮಹತ್ವ ಇಲ್ಲದ ಬಜೆಟ್ ಮಂಡಿಸಿದೆ. 1947ರಿಂದ 2018 ತನಕ ರಾಜ್ಯ ಸರ್ಕಾರದ ಸಾಲ ಇದ್ದಿದ್ದು 2,42,000 ಕೋಟಿ. 2018 ರಿಂದ 2023 ತನಕದ ನಾಲ್ಕು ವರ್ಷಗಳಲ್ಲಿ ಸರ್ಕಾರ 5,64,814 ಕೋಟಿ ರೂ. ಸಾಲ ತೆಗೆದುಕೊಂಡಿದೆ. ರಾಜ್ಯದ ಜನ ಸಾಲದ ಭಾರವನ್ನು ಹೊರೆಯುವಂತಾಗಿದೆ ಎಂದರು.

ಬಿಜೆಪಿ ಮೂರು ವರ್ಷದಲ್ಲಿ 2,80,000 ಕೋಟಿ ರೂಪಾಯಿ ಸಾಲ ಮಾಡಿದೆ. ಬಾರಿ 78,000 ಕೋಟಿ ಸಾಲ ಮಾಡೋದಾಗಿ ಹೇಳಿದೆ. ಮೂರು ಲಕ್ಷ ಸಾವಿರ ಕೋಟಿಯ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳಿಲ್ಲ. ಇಷ್ಟು ದೊಡ್ಡ ಮೊತ್ತದ ಸಾಲ ಭರಿಸಲು 34 ಸಾವಿರ ಕೋಟಿ ರೂ. ಬಡ್ಡಿಯನ್ನು ಪ್ರತಿ ತಿಂಗಳು ರಾಜ್ಯ ಸರ್ಕಾರ ಕಟ್ಟಬೇಕಾಗಿದೆ. ಜಾತ್ರೋತ್ಸವ ಸಂದರ್ಭದಲ್ಲಿ ಬ್ಯಾಂಡ್ ಹೊಡೆಯುವಂತೆ ಸರ್ಕಾರ ಬಜೆಟ್ ಮಂಡಿಸಿದೆ ಎಂದು ಆಕ್ರೋಶ ಹೊರಹಾಕಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com