Breaking News

ಸಂತ ಸೇವಾಲಾಲರು ಪವಾಡ ಪುರುಷರು: ಡಾ. ಕುಮಾರ್ ನಾಯ್ಕ್

 

ಮಂಗಳೂರು: ಭಕ್ತರ ಕಷ್ಟಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿದ್ದ ಸಂತ ಸೇವಾಲಾಲ್ ಅವರು ಪವಾಡ ಪುರುಷ ಎಂದೇ ಖ್ಯಾತಿಗಳಿಸಿದವರು. ಅವರು ಬದುಕಿದ್ದ ಕಾಲಘಟ್ಟದಲ್ಲಿ ಬಂಜಾರ ಜನಾಂಗದ ಲಿಪಿಯ ಕೊರತೆಯಿಂದಾಗಿ ಅವರ ಪವಾಡಗಳು ಬೆಳಕಿಗೆ ಬರಲಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಪಶ್ಚಿಮ ವಲಯ ಜಾರಿ ವಿಭಾಗದ ಜಂಟಿ ಆಯುಕ್ತ ಡಾ.ಕುಮಾರ ನಾಯ್ಕ ಜಿ ಹೇಳಿದರು.

 ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರಾವಳಿ  ಸಂತ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘದ ವತಿಯಿಂದ ಪುರಭವನದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ಅವರ 284ನೇ ಜಯಂತಿಯನ್ನು ಉದ್ಘಾಟಿಸಿ, ಉಪನ್ಯಾಸ ನೀಡಿದರು.

ಬಂಜಾರ ಜನರಲ್ಲಿನ ಬಡತನ, ಅವಿದ್ಯಾವಂತಿಕೆಯಿಂದಾಗಿ ಸಂತ ಸೇವಾಲಾಲರ ಪವಾಡಗಳನ್ನು ಜಗತ್ತಿಗೆ ತಿಳಿಸಲು ಆಗಲಿಲ್ಲ, ಆದರೆ ಈಗ  ಬಂಜಾರ ಜನಾಂಗದಲ್ಲಿ ಶಿಕ್ಷಣ ಪಡೆದವರು ಇರುವ ಕಾರಣ ಸಂತರ ಪವಾಡಗಳು ಜಗತ್ತಿಗೆ ತಿಳಿದಿವೆ. ಸೇವಾಲಾಲ್ ಅವರ ಆದರ್ಶಗಳು, ನುಡಿಮುತ್ತುಗಳನ್ನು ಪ್ರಚಾರ ಮಾಡಲಾಗುತ್ತಿದೆ, ಹಬ್ಬ, ಹರಿದಿನಗಳಲ್ಲಿ ಜನಾಂಗದ ಹೆಣ್ಣು ಮಕ್ಕಳು ಹಾಡುತ್ತಿದ್ದ ಹಾಡುಗಳಲ್ಲಿ, ಕಥೆಗಳಲ್ಲಿ ಜಾನಪದಗಳಲ್ಲಿ, ಪುರಾಣಗಳಲ್ಲಿ ಅವರ ಪವಾಡಗಳನ್ನು ತಿಳಿಯಲಾಗಿದೆ ಎಂದರು.

ಸಂತ ಸೇವಾಲಾಲರು ನಿರ್ವಾಣವಾದ ದಿನದಿಂದಲೂ ಅವರು ಮಾಡುತ್ತಿದ್ದ ಪವಾಡಗಳ ಮಹತ್ವವನ್ನು ಕೇಳಲಾಗುತ್ತಿದೆ, ಅವರು ಆಗಿನ ಕಾಲದ ವಿಶ್ವಮಾನವರೆಂದೇ ಬಣ್ಣಿಸಬಹುದು ಎಂದರು.

  1.  

 ಅವರು ಎಲ್ಲರಿಗೂ ಶುಭ ಸಂದೇಶಗಳನ್ನೇ ನೀಡುತ್ತಿದ್ದರು, ಶಿಕ್ಷಣ ಹಾಗೂ ಜಾಗೃತಿಯ ಮಹತ್ವವನ್ನು ಅರಿತಿದ್ದ ಅವರು, ಶಿಕ್ಷಣ ಪಡೆಯಿರಿ ಹಾಗೂ ಇತರರು ಶಿಕ್ಷಣ ಪಡೆಯಲು ಅನುಕೂಲ ಮಾಡಿ, ಅದರಿಂದ ಒಗ್ಗಟ್ಟು ಮೂಡುತ್ತದೆ ಎಂದು ಹೇಳಿದ್ದರು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷರಾದ ರಾಜಪ್ಪ ಮಾತನಾಡಿದರು.

ಕರಾವಳಿ ಸೇವಾಲಾಲ್ ಬಂಜಾರ ಸಂಘದ ಗೌರವ ಅಧ್ಯಕ್ಷರಾದ ಜಯಪ್ಪ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.  ಗೀತಾ ಪ್ರದೀಪ್ ವಂದಿಸಿದರು. ಪ್ರದೀಪ್.ಡಿ.ಎಂ.ಹಾವಂಜೆ ನಿರೂಪಿಸಿದರು.

ಸಂತ ಸೇವಾಲಾಲ್ ಅವರ ಅಭಿಮಾನಿಗಳು, ಅನುಯಾಯಿಗಳು, ಬಂಜಾರ ಜನಾಂಗದ ಸಹಸ್ರಾರು ಜನರು ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com