Breaking News

ಮಲ್ಪೆ ಮೀನುಗಾರರ ಬಲೆಗೆ ದೈತ್ಯ ಮೀನು: ಜಾಲತಾಣದಲ್ಲಿ ವೈರಲ್

 

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ವೊಂದಕ್ಕೆ ಬರೋಬ್ಬರಿ 200 ಕೆಜಿ ಗೂ ಅಧಿಕ ತೂಕದ  ಮೀನೊಂದು ಬಲೆಗೆ ಬಿದ್ದಿದೆ. ಶಾಂಭವಿ ಎನ್ನುವ ಹೆಸರಿನ ಬೋಟ್  ಮೀನುಗಾರರಿಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ದೈತ್ಯ ಮೀನು ಬಲೆಗೆ ಸಿಕ್ಕಿದೆ.

  1.  

ಸ್ಥಳೀಯವಾಗಿ ಮೀನಿಗೆ ಕಟ್ಟೆ ಕೊಂಬು ಮೀನು ಎಂದು ಕರೆಯಲಾಗುತ್ತಿದ್ದು, ಕೆಜಿಗೆ 250 ರೂಪಾಯಿ ದರ ಇದೆ ಅನ್ನುವ ಮಾಹಿತಿ ಇದೆ. ಜಾತಿಯ ಸಣ್ಣ ಮೀನಿಗೆ ಇರುವಷ್ಟು ದರ ದೊಡ್ಡ ಮೀನಿಗೆ ಇಲ್ಲ ಎನ್ನಲಾಗಿದೆ. ಆದರೆ, ದೈತ್ಯ ಮೀನನ್ನು ಕ್ರೇನ್ ಮೂಲಕ ವಿಲೇವಾರಿ ಮಾಡಿದ್ದು ಮಲ್ಪೆಯಲ್ಲಿ ಸೇರಿದ್ದ ಮತ್ಸ್ಯ ಪ್ರಿಯರ ಗಮನ ಸೆಳೆಯಿತು.

ಸದ್ಯ ಕ್ರೇನ್ ಮೂಲಕ ಬೋಟ್ ನಿಂದ ಹೊರತೆಗೆದ ಮೀನಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com