Breaking News

ಪ್ರೇಮಿಗಳ ದಿನ ವಿನೂತನ ರೀತಿಯ ಪ್ರತಿಭಟನೆ

 

ಚೆನ್ನೈ:  ಫೆ. 14  ಪ್ರೇಮಿಗಳ ದಿನ. ದೇಶದಲ್ಲಿ ಪ್ರೇಮಿಗಳ ದಿನವನ್ನು ಆಚರಣೆ ಬೇಡ,  ಇದು ನಮ್ಮ ಸಂಸ್ಕೃತಿಯೇ ಅಲ್ಲ ಎಂದು ಕೆಲ ಸಂಘಟನೆಗಳು ವರ್ಷವೂ ಪ್ರತಿಭಟನೆಯ ಹಾದಿ ಹಿಡಿದಿವೆ.

ತಮಿಳುನಾಡಿನಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಫೆ. 14 ಅನ್ನು ವಿರೋಧಿಸಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದ್ದಾರೆ.

  1.  

ತಮಿಳುನಾಡಿನ ಹಿಂದೂ ಮುನ್ನಾನಿ ಎನ್ನುವ ಸಂಘಟನೆ ವ್ಯಾಲೆಂಟೈನ್ಸ್ ಡೇ ಅನ್ನು ವಿರೋಧಿಸಿ, ಬೀದಿ ನಾಯಿಗಳ ಅಣುಕು ಮದುವೆ ಮಾಡಿ, ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಮುನ್ನಾನಿ ಸಂಘಟನೆ ಪ್ರತಿವರ್ಷ ಪ್ರೇಮಿಗಳ ದಿನವನ್ನು ವಿರೋಧಿಸಿ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತದೆ.

ಹಿಂದೂ ಮುನ್ನಾನಿ ಕಾರ್ಯಕರ್ತರು ಎರಡು ನಾಯಿಗಳನ್ನು ಕರೆತಂದು ಅವುಗಳಿಗೆ ಬಟ್ಟೆ, ಹಾರಗಳನ್ನು ಹಾಕಿ, ಅಣಕು ಮದುವೆ ಮಾಡಿಸಿದ್ದಾರೆ.

ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಇದನ್ನು ವಿರೋಧಿಸಿ ನಾವು ನಾಯಿಗಳ ಮದುವೆಯನ್ನು ನಡೆಸಿದ್ದೇವೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com