Breaking News

1700 ಅಡಿ ಎತ್ತರದ ಗಡಾಯಿಕಲ್ಲ ಗುಡ್ಡ ಏರಿದ ಕೋತಿ ರಾಜ್

 

ಮಂಗಳೂರು (ಬೆಳ್ತಂಗಡಿ): ಜ್ಯೋತಿರಾಜ್ ಯಾನೆ ಕೋತಿ ರಾಜ್ ಭಾನುವಾರ 2 ತಾಸಿನಲ್ಲಿ 1700 ಅಡಿ ಎತ್ತರದ ಗಡಾಯಿಕಲ್ಲನ್ನು ಯಾವುದೇ ಮೆಟ್ಟಿಲುಗಳ ಸಹಾಯವಿಲ್ಲದೆ ಕೈಗಳ ಸಹಾಯದಿಂದ ಹತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕೈ ಮೂಲಕ ಸಮುದ್ರ ಮಟ್ಟದಿಂದ 1700 ಅಡಿಯ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲನ್ನು ಪ್ರಪ್ರಥಮ ಬಾರಿಗೆ ಏರುವ ಮೂಲಕ ಮಂಕಿ ಮ್ಯಾನ್ ಮತ್ತೊಂದು ದಾಖಲೆ ಮೆರೆದಿದ್ದಾರೆ.

  1.  

ಇಲ್ಲಿನ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನದ ಉತ್ತರ ಭಾಗದಿಂದ ಗಡಾಯಿಕಲ್ಲು ಬಂಡೆ ಏರುವ ಮೊದಲು ಕ್ಕೆ ತೆಂಗಿನ ಕಾಯಿ ಒಡೆದು ಹತ್ತಲು ಆರಂಭಿಸಿದ್ದಾರೆ. 11.50 ರ ಸುಮಾರಿಗೆ ಗಡಾಯಿಕಲ್ಲು ತುತ್ತ ತುದಿ ಏರಿ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಕನ್ನಡಭಿಮಾನ ಮೆರೆದಿದ್ದಾರೆ.

ಇವರ ತಂಡದಿಂದೊಗೆ ಕುದುರೆಮುಖ ವನ್ಯಜೀವಿ ವಿಭಾಗದ ಆರ್.ಎಫ್.ಒ. ಸ್ವಾತಿ, ಅರಣ್ಯ ರಕ್ಷಕ ಕಿರಣ್ ಪಾಟೀಲ ಇದ್ದರು.

ತನ್ನ ತಂಡದ 8 ಮಂದಿ ಜೊತೆಗೆ ಶನಿವಾರ ಆಗಮಿಸಿದ ಅವರು ಪೂರ್ವ ಸಿದ್ಧತೆಗಳನ್ನು ನಡೆಸಿದ್ದರು. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಶಾಸಕ ಹರೀಶ್ ಪೂಂಜ ಮತ್ತು ಅರಣ್ಯ ಇಲಾಖೆಯ ಸಹಕಾರವನ್ನು ಅವರು  ಸ್ಮರಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com