Breaking News

ರೋಹಿತ್ ಶರ್ಮಾ ಎಲ್ಲ ಮಾದರಿ ಕ್ರಿಕೆಟ್ ನಲ್ಲಿ ದಾಖಲೆ ಬರೆದ ಆಟಗಾರ

 

ನವದೆಹಲಿನಾಯಕ ರೋಹಿತ್ ಶರ್ಮಾ ಅವರು ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಗೆ ಭಾಜನರಾಗಿದ್ದಾರೆ.

ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯ  ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 9 ನೇ ಟೆಸ್ಟ್ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಹೊಸದೊಂದು ದಾಖಲೆ ನಿರ್ಮಿಸಿದರು.

ರೋಹಿತ್ ನಾಯಕನಾಗಿ ಆಡಿದ  ಮೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದರು.  ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ದಕ್ಷಿಣ ಆಫ್ರಿಕಾದ ಎಫ್ ಡು ಪ್ಲೆಸಿಸ್ ಹಾಗೂ  ಪಾಕಿಸ್ತಾನದ ಬಾಬರ್ ಆಜಂ ನಂತರ ಎಲ್ಲಾ 3 ಸ್ವರೂಪದ ಪಂದ್ಯಗಳಲ್ಲಿ ಶತಕ ದಾಖಲಿಸಿದ ವಿಶ್ವದ 3ನೇ ನಾಯಕರಾದರು.

  1.  

ರೋಹಿತ್ ಶರ್ಮಾ 171 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ ಶತಕ ಪೂರೈಸಿದರು. ಇಂಗ್ಲೆಂಡ್ ವಿರುದ್ಧ ಓವಲ್ನಲ್ಲಿ ಸೆ. 2021 ರಲ್ಲಿ ರೋಹಿತ್ ಕೊನೆ ಬಾರಿಗೆ ಮೂರಂಕೀಯ  ಸ್ಕೋರ್ ದಾಖಲಿಸಿದ್ದರು, ಒಂದೂವರೆ ವರ್ಷಗಳ ನಂತರ ರೋಹಿತ್ ಶತಕ ಸಿಡಿಸಿದರು.

ಇದು ರೋಹಿತ್ ಆಸ್ಟ್ರೇಲಿಯ ವಿರುದ್ಧ ಗಳಿಸಿರುವ ಮೊದಲ ಟೆಸ್ಟ್ ಶತಕವಾಗಿದೆ. ಕೇವಲ 21 ಇನ್ನಿಂಗ್ಸ್ಗಳಲ್ಲಿ ಆರಂಭಿಕರಾಗಿ ಆರನೇ ಶತಕ ಸಿಡಿಸಿದರು. ಒಟ್ಟಾರೆಯಾಗಿ 35 ವರ್ಷ ವಯಸ್ಸಿನ ರೋಹಿತ್ ಒಟ್ಟು  ಒಂಬತ್ತು ಶತಕಗಳೊಂದಿಗೆ 3,000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದಾರೆ.

ಸೀಮಿತ ಓವರ್ಗಳ ಕ್ರಿಕೆಟ್ ನಲ್ಲಿ ಉತ್ತಮ ಓಪನರ್ ಆಗಿದ್ದ ರೋಹಿತ್ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್  ಆರಂಭಿಸಿದ್ದರು. ವಿಶಾಖಪಟ್ಟಣಂನಲ್ಲಿ ಬೆನ್ನುಬೆನ್ನಿಗೆ ಶತಕಗಳನ್ನು ಗಳಿಸಿದ್ದರು.

ರೋಹಿತ್ ಮೊದಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (2019-21) ನಲ್ಲಿ  12 ಪಂದ್ಯಗಳಿಂದ 1, 094 ರನ್ಗಳೊಂದಿಗೆ ಆರಂಭಿಕರಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com